ಮನಿಲಾ(ಇಂಡೋನೇಷ್ಯಾ); ತಾತ್ಕಾಲಿಕ ಪ್ರಯಾಣ ನಿಷೇಧ ತೆರವುಗೊಳಿಸಿದ ಬಳಿಕ ಪಿಲಿಪ್ಪೀನ್ಸ್‌ನಲ್ಲಿ ಉಳಿದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಮರಳಿ ಭಾರತಕ್ಕೆ ಬರಬಹುದು ಎಂದು ಮನಿಲಾದಲ್ಲಿರುವ ಭಾರತೀಯ ರಾಯಬಾರ ಕಚೇರಿ ತಿಳಿಸಿದೆ. ಜೊತೆಗೆ ದೇಶದಲ್ಲಿರುವ ತವರಿಗೆ ತರಳಲು ಆಗದೇ ಸಂಕಷ್ಟದಲ್ಲಿರುವ ಎಲ್ಲಾ ಭಾರತೀಯರಿಗೆ ಸಕಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದೆ.
ನಿರ್ಬಂಧ ತೆರವು ಬಳಿಕ ವಿದ್ಯಾರ್ಥಿಗಳು ಭಾರತಕ್ಕೆ ಮರಳಬಹುದು: ರಾಯಭಾರ ಕಚೇರಿ ಸ್ಪಷ್ಟನೆ - ಕೊವಿಡ್-19 ವೈರಸ್
ಮಾರ್ಚ್ 17 ರಂದು ಕೋವಿಡ್-19 ವೈರಸ್ ಹರಡುವುದನ್ನು ನಿಯಂತ್ರಿಸಲು ಭಾರತ ಸರ್ಕಾರ, ಅಫ್ಘಾನಿಸ್ತಾನ, ಪಿಲಿಪ್ಪೀನ್ಸ್ ಮತ್ತು ಮಲೇಶಿಯಾದಿಂದ ಪ್ರಯಾಣಿಕರು ಭಾರತಕ್ಕೆ ಬರುವುದನ್ನು ನಿರ್ಬಂಧಿಸಿತ್ತು.
![ನಿರ್ಬಂಧ ತೆರವು ಬಳಿಕ ವಿದ್ಯಾರ್ಥಿಗಳು ಭಾರತಕ್ಕೆ ಮರಳಬಹುದು: ರಾಯಭಾರ ಕಚೇರಿ ಸ್ಪಷ್ಟನೆ Indian students](https://etvbharatimages.akamaized.net/etvbharat/prod-images/768-512-6550519-thumbnail-3x2-students.jpg)
ಮಾರ್ಚ್ 17 ರಂದು ಕೋವಿಡ್-19 ವೈರಸ್ ಹರಡುವುದನ್ನು ನಿಯಂತ್ರಿಸಲು ಭಾರತ ಸರ್ಕಾರ, ಅಫ್ಘಾನಿಸ್ತಾನ, ಪಿಲಿಪ್ಪೀನ್ಸ್ ಮತ್ತು ಮಲೇಶಿಯಾದಿಂದ ಪ್ರಯಾಣಿಕರು ಭಾರತಕ್ಕೆ ಬರುವುದನ್ನು ನಿರ್ಬಂಧಿಸಿತ್ತು.
ಸಂಕಷ್ಟದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸಂಪರ್ಕದಲ್ಲಿ ನಾವಿದ್ದೇವೆ. ಇಲ್ಲಿ ಅಂಗಡಿಗಳು ಸೇರಿದಂತೆ ಮತ್ತಿತರ ಜೀವನಾವಶ್ಯಕ ವಸ್ತುಗಳು ಅವರಿಗೆ ಲಭ್ಯವಾಗುತ್ತಿದೆ. ಇದರ ಹೊರತಾಗಿ ಭಾರತೀಯ ಹೋಟೆಲ್‌ಗಳು ಸಹಕಾರಕ್ಕಿವೆ. ಭಾರತದಲ್ಲಿ ತಾತ್ಕಾಲಿಕ ಪ್ರಯಾಣ ನಿಷೇಧ ತೆರವುಗೊಳಿಸಿದ ನಂತರ ಪಿಲಿಪ್ಪೀನ್ಸ್‌ನಲ್ಲಿರುವ 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸಬಹುದು. ಏನೇ ಸಮಸ್ಯೆಗಳು ಅಥವಾ ಸಹಾಯ ಬೇಕಿದ್ದರೂ ತುರ್ತು ದೂರವಾಣಿ ಸಂಖ್ಯೆ 09477836524 ಎಂದು ಮಾನಿಲಾದಲ್ಲಿರುವ ಭಾರತೀಯ ಕಚೇರಿ ತಿಳಿಸಿದೆ.