ಕರ್ನಾಟಕ

karnataka

ETV Bharat / international

25 ಭಾರತೀಯರು ಸೇರಿ 75 ಪ್ರಯಾಣಿಕರನ್ನು ಹೊತ್ತ ಸೇನಾ ವಿಮಾನ ದೆಹಲಿಗೆ ಆಗಮನ

ಕಾಬೂಲ್‌ನಲ್ಲಿ ಸಿಲುಕಿದ್ದ 25 ಭಾರತೀಯರು ಸೇರಿದಂತೆ 78 ಮಂದಿಯನ್ನು ಹೊತ್ತ ವಾಯುಸೇನೆಯ ಎಐ-1956 ವಿಮಾನ ತಜಿಕಿಸ್ತಾನದ ದುಶಾಂಬೆಯಿಂದ ದೆಹಲಿಗೆ ಆಗಮಿಸಿದೆ.

Passengers evacuated from Kabul
25 ಭಾರತೀಯರು ಸೇರಿ 75 ಪ್ರಯಾಣಿಕರನ್ನು ಹೊತ್ತ ಸೇನಾ ವಿಮಾನ ದುಶಾಂಬೆಯಿಂದ ದೆಹಲಿಯತ್ತ ಪ್ರಯಾಣ

By

Published : Aug 24, 2021, 10:30 AM IST

Updated : Aug 24, 2021, 10:51 AM IST

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ರಕ್ಷಣಾ ಕಾರ್ಯಾಚರಣೆ ಮುಂದುವರಿದ್ದು, ತಜಿಕಿಸ್ತಾನದ ದುಶಾಂಬೆಯಿಂದ 25 ಭಾರತೀಯರು ಸೇರಿದಂತೆ 78 ಮಂದಿಯನ್ನು ಹೊತ್ತ ವಾಯುಸೇನೆಯ ಎಐ-1956 ವಿಮಾನ ದೆಹಲಿಗೆ ಆಗಮಿಸಿದೆ.

ವಿಮಾನದಲ್ಲಿರುವ ಭಾರತೀಯರು 'ಜೋ ಬೋಲೆ ಸೋ ನಿಹಾಲ್ ಸತ್ ಶ್ರೀ ಅಕಲ್ ಹಾಗೂ ವಹೇಗುರು ಜಿ ಕಾ ಖಲ್ಸಾ ವಹೇಗುರು ಜಿ ಕಿ ಫತೇಹ್' ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಭಾರತೀಯರನ್ನು ಕರೆತಂದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಗ್ಚಿ ಟ್ವೀಟ್‌ ಮೂಲಕ ಮಾಹಿತಿ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಆಗಸ್ಟ್‌ 31ರೊಳಗೆ ಅಫ್ಘಾನ್‌ನಿಂದ ಅಮೆರಿಕ ಸೇನೆ ವಾಪಸ್‌ ಪಡೆದರೆ ಅಲ್ಲಿನ ಜನರ ಪಾಡೇನು?

ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ, ವಿದೇಶಾಂಗ ವ್ಯವಹಾರಗಳ ಇಲಾಖೆ ರಾಜ್ಯಖಾತೆ ಸಚಿವ ಮುರಳೀಧರನ್ ಮತ್ತು ಬಿಜೆಪಿ ನಾಯಕ ಆರ್.ಪಿ.ಸಿಂಗ್ ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಬೂಲ್ ನಿಂದ ವಿಮಾನ ಮೂಲಕ ತಂದ ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹಿಬ್‌ನ ಸ್ವರೂಪ್ ಅನ್ನು ಸ್ವೀಕರಿಸಿದರು.

Last Updated : Aug 24, 2021, 10:51 AM IST

ABOUT THE AUTHOR

...view details