ಯುಎಇ:ಎರಡು ಮಾವಿನ ಹಣ್ಣು ಕಳ್ಳತನ ಮಾಡಿದ್ದ ಆರೋಪಿಯನ್ನು ದೇಶದಿಂದ ಗಡಿಪಾರು ಮಾಡಿ ಕೋರ್ಟ್ ಆದೇಶ ಹೊರಡಿಸಿರುವ ವಿಚಿತ್ರ ಪ್ರಕರಣ ದುಬೈನಲ್ಲಿ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ವ್ಯಕ್ತಿಗೆ ದುಬೈ ಕೋರ್ಟ್ ಗಡಿಪಾರು ಮಾಡಿ ಆದೇಶ ಹೊರಡಿಸಿದೆ. ಪ್ರಯಾಣಿಕರೊಬ್ಬರ ಬ್ಯಾಗ್ನಿಂದ ಎರಡು ಮಾವಿನ ಹಣ್ಣುಗಳನ್ನು ಕದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.
27 ವರ್ಷದ ಕೆಲಸಗಾರನಿಗೆ ಈ ಶಿಕ್ಷೆ ವಿಧಿಸಲಾಗಿದ್ದು, ಗಡಿಪಾರಿನ ಜೊತೆಗೆ 5,000 ದಿರ್ಹಾಮ್ (dirham ) ದಂಡ ಕೂಡ ವಿಧಿಸಲಾಗಿದೆ. ಆತ ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ನಲ್ಲಿ ಕೆಲಸ ಮಾಡುತ್ತಿದ್ದ. ಪ್ರಯಾಣಿಕರ ಲಗೇಜ್ಗಳನ್ನು ಕಂಟೇನರ್‌ನಿಂದ ಕನ್ವೇಯರ್ ಬೆಲ್ಟ್‌ಗೆ ಲೋಡ್ ಮಾಡುವುದು ಆರೋಪಿಯ ಕೆಲಸವಾಗಿತ್ತು.
ಆದರೆ ಆರೋಪಿಯು ಭಾರತಕ್ಕೆ ರವಾನೆಯಾಗಬೇಕಿದ್ದ ಹಣ್ಣಿನ ಬಾಕ್ಸ್ನಿಂದ ಎರಡು ಮಾವಿನ ಹಣ್ಣುಗಳನ್ನು ಈತ ಕದ್ದಿದ್ದ. ಈತನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.