ಕರ್ನಾಟಕ

karnataka

ETV Bharat / international

ದೋಹಾದಲ್ಲಿ ತಾಲಿಬಾನ್ ಪ್ರತಿನಿಧಿ ಭೇಟಿಯಾದ ಭಾರತೀಯ ರಾಯಭಾರಿ - ಕತಾರ್‌ನ ಭಾರತದ ರಾಯಭಾರಿ ದೀಪಕ್ ಮಿತ್ತಲ್

ಅಫ್ಘಾನಿಸ್ತಾನದಿಂದ ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ಭಾರತ ಮತ್ತು ತಾಲಿಬಾನ್ ನಡುವಿನ ಮೊದಲ ಔಪಚಾರಿಕ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ, ಕತಾರ್‌ನ ಭಾರತದ ರಾಯಭಾರಿ ದೀಪಕ್ ಮಿತ್ತಲ್, ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್ ಅವರನ್ನು ಭೇಟಿಯಾದರು.

Doha
ಭಾರತೀಯ ರಾಯಭಾರಿ

By

Published : Aug 31, 2021, 9:17 PM IST

ದೋಹಾ (ಕತಾರ್​):ದೀರ್ಘಕಾಲೀನ ಯುದ್ಧ ಕೊನೆಗೊಳಿಸಿ ಅಫ್ಘಾನಿಸ್ತಾನದಿಂದ ಅಮೆರಿಕ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ಭಾರತ ಮತ್ತು ತಾಲಿಬಾನ್ ನಡುವಿನ ಮೊದಲ ಔಪಚಾರಿಕ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ, ಕತಾರ್‌ನ ಭಾರತದ ರಾಯಭಾರಿ ದೀಪಕ್ ಮಿತ್ತಲ್, ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ ಜಾಯ್ ಅವರನ್ನು ಭೇಟಿಯಾದರು.

ತಾಲಿಬಾನ್ ಕಡೆಯ ಕೋರಿಕೆಯ ಮೇರೆಗೆ ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಈ ಸಭೆ ನಡೆಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಮತ್ತು ಆರಂಭಿಕ ವಾಪಸಾತಿಯ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿವೆ.

ಇದನ್ನೂ ಓದಿ:ಸೇನೆ ಸಂಪೂರ್ಣವಾಗಿ ಹಿಂತೆಗೆದುಕೊಂಡ ಅಮೆರಿಕ: ಕಾಬೂಲ್​ನಲ್ಲಿ Taliban​ ವಿಜಯೋತ್ಸವ

ಅಫ್ಘಾನ್ ಪ್ರಜೆಗಳು, ವಿಶೇಷವಾಗಿ ಅಲ್ಪಸಂಖ್ಯಾತರು, ಭಾರತಕ್ಕೆ ಭೇಟಿ ನೀಡಲು ಬಯಸುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ. ಅಫ್ಘಾನಿಸ್ತಾನದ ಮಣ್ಣನ್ನು ಭಾರತೀಯ ವಿರೋಧಿ ಚಟುವಟಿಕೆಗಳಿಗೆ ಮತ್ತು ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿ ಬಳಸಬಾರದು ಎಂದು ರಾಯಭಾರಿ ಮಿತ್ತಲ್ ಭಾರತದ ಕಳವಳ ವ್ಯಕ್ತಪಡಿಸಿದರು.

ಈ ಸಮಸ್ಯೆಗಳನ್ನು ಧನಾತ್ಮಕವಾಗಿ ಪರಿಹರಿಸಲಾಗುವುದು ಎಂದು ತಾಲಿಬಾನ್ ಪ್ರತಿನಿಧಿ ರಾಯಭಾರಿಗೆ ಭರವಸೆ ನೀಡಿದರು. ಈ ಮೊದಲು, ಅಫ್ಘಾನಿಸ್ತಾನದಲ್ಲಿ ಭಾರತದ ಅಭಿವೃದ್ಧಿ ಕಾರ್ಯಗಳನ್ನು ತಾಲಿಬಾನ್ ಶ್ಲಾಘಿಸಿತ್ತು.

ಇದನ್ನೂ ಓದಿ:ಕಾಶ್ಮೀರದ ವಿಷಯದಲ್ಲಿ ತಾಲಿಬಾನ್ ಜತೆ ಭಾರತ ಒಪ್ಪಂದ ಮಾಡಿಕೊಳ್ಳುತ್ತದೆಯೇ?

ABOUT THE AUTHOR

...view details