ಕರ್ನಾಟಕ

karnataka

ಕೇವಲ ಎರಡೇ ವರ್ಷದಲ್ಲಿ ಶೇ.60 ರಷ್ಟು ವ್ಯಾಪಾರ ವೃದ್ಧಿ..! ಯಾವ ದೇಶದೊಂದಿಗೆ..?

By

Published : Aug 26, 2019, 1:14 PM IST

ಬ್ಯಾಂಕಾಕ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಅಂಕಿ- ಅಂಶಗಳು ಈ ವೃದ್ಧಿಯನ್ನ ಎತ್ತಿ ತೋರಿಸಿವೆ. 2016ರಿಂದ ಇಲ್ಲಿವರೆಗೂ ಈ ಬೆಳವಣಿಗೆ ಆಗಿದೆ.  2014ಕ್ಕಿಂತ ಐದು ವರ್ಷಗಳ ಮುಂಚೆ ಎರಡೂ ರಾಷ್ಟ್ರಗಳ ನಡುವಣ ವ್ಯಾಪಾರದಲ್ಲಿ ಶೇ 44 ರಷ್ಟು ಕುಸಿತ ಕಂಡಿತ್ತು.

ವ್ಯಾಪಾರ

ಸಿಂಗಾಪುರ:ಆಗ್ನೇಯ ಏಷ್ಯಾದ ಥಾಯ್ಲೆಂಡ್​ ಹಾಗೂ ಭಾರತದ ನಡುವೆ ಕೇವಲ 2 ವರ್ಷಗಳಲ್ಲಿ ಶೇ.60ರಷ್ಟು ವ್ಯಾಪಾರ ವಹಿವಾಟು ವೃದ್ಧಿಯಾಗಿದೆ. ಇದು ಎರಡು ರಾಷ್ಟ್ರಗಳ ನಡುವಣ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

ಬ್ಯಾಂಕಾಕ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಅಂಕಿ- ಅಂಶಗಳು ಈ ವೃದ್ಧಿಯನ್ನ ಎತ್ತಿ ತೋರಿಸಿವೆ. 2016ರಿಂದ ಇಲ್ಲಿವರೆಗೂ ಈ ಬೆಳವಣಿಗೆ ಆಗಿದೆ. 2014ಕ್ಕಿಂತ ಐದು ವರ್ಷಗಳ ಮುಂಚೆ ಎರಡೂ ರಾಷ್ಟ್ರಗಳ ನಡುವಣ ವ್ಯಾಪಾರದಲ್ಲಿ ಶೇ 44 ರಷ್ಟು ಕುಸಿತ ಕಂಡಿತ್ತು. 2014ರಲ್ಲಿ ಥಾಯ್ಲೆಂಡ್​ ಹಾಕಿದ್ದ ಮಿಲಿಟರಿ ಕಾನೂನು ವ್ಯಾಪಾರ ಕುಸಿತಕ್ಕೆ ಕಾರಣವಾಗಿತ್ತು.

ವಿಶ್ವಬ್ಯಾಂಕ್​​​​ನ ವರದಿ ಪ್ರಕಾರ ಥಾಯ್ಲೆಂಡ್​​​ನ ಜಿಡಿಪಿ 2018ರಲ್ಲಿ 505 ಬಿಲಿಯನ್​ ಅಮೆರಿಕನ್​ ಡಾಲರ್​​ ಆಗಿತ್ತು. ಇದರಲ್ಲಿ ಮೂರನೇ ಎರಡರಷ್ಟು ಭಾಗ ರಫ್ತಿನಿಂದಲೇ ಬಂದಿದ್ದು ಎಂದು ಆ ವರದಿಯಲ್ಲಿ ಹೇಳಲಾಗಿತ್ತು.

ABOUT THE AUTHOR

...view details