ಕರ್ನಾಟಕ

karnataka

ETV Bharat / international

ಅಫ್ಘಾನಿಸ್ತಾನಕ್ಕೆ 2 ಟನ್‌ ಅಗತ್ಯ ಜೀವರಕ್ಷಕ ಔಷಧ ರವಾನಿಸಿದ ಭಾರತ - India supplied the third batch of medical assistance consisting of two tons of essential life-saving medicines to Afghanistan

ಮಾನವೀಯತೆಯ ನೆಲೆಯಲ್ಲಿ ಭಾರತ ಇಂದು ಅಫ್ಘಾನಿಸ್ತಾನಕ್ಕೆ 2 ಟನ್‌ನಷ್ಟು ಜೀವರಕ್ಷಕ ಔಷಧಗಳನ್ನು ತಲುಪಿಸಿದೆ.

India supplied the third batch of medical assistance consisting of two tons of essential life-saving medicines to Afghanistan
ಅಫ್ಘಾನಿಸ್ತಾನಕ್ಕೆ ಮತ್ತೊಮ್ಮೆ ಭಾರತ ಉದಾರತೆ; 2 ಟನ್‌ನಷ್ಟು ಅಗತ್ಯ ಜೀವರಕ್ಷಕ ಔಷಧ ರವಾನೆ

By

Published : Jan 7, 2022, 6:22 PM IST

ನವದೆಹಲಿ:ಇದೇ ಜನವರಿ 1 ರಂದು ಅಫ್ಘಾನಿಸ್ತಾನಕ್ಕೆ 5 ಲಕ್ಷ ಕೋವಿಡ್‌ ವ್ಯಾಕ್ಸಿನ್‌ ನೀಡಿ ಉದಾರತೆ ಮೆರೆದಿದ್ದ ಭಾರತ, ಇಂದು ಮತ್ತೆ 2 ಟನ್‌ ಅಗತ್ಯ ವೈದ್ಯಕೀಯ ಸಾಮಗ್ರಿಯನ್ನು ತಾಲಿಬಾನ್‌ ಆಡಳಿತದ ದೇಶಕ್ಕೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದೆ.

ಕಾಬೂಲ್‌ನ ಇಂದಿರಾಗಾಂಧಿ ಆಸ್ಪತ್ರೆಗೆ ಸಾಮಗ್ರಿಗಳನ್ನು ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಾಹಿತಿ ನೀಡಿದೆ. ಆ ದೇಶದ ಜನರೊಂದಿಗೆ ವಿಶೇಷ ಸಂಬಂಧ ಮುಂದುವರಿಸಲು ಮತ್ತು ಅವರಿಗೆ ಮಾನವೀಯ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಆಹಾರ ಕೊರತೆ, ನಿರುದ್ಯೋಗ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಅಲ್ಲಿನ ಜನ ಎದುರಿಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details