ಕರ್ನಾಟಕ

karnataka

ETV Bharat / international

ಸೇನಾಧಿಕಾರಿಗಳ ಮಾತುಕತೆ ಬೆನ್ನಲ್ಲೇ 2.5 ಕಿ.ಮೀ ಹಿಂದೆ ಸರಿದ ಭಾರತ, ಚೀನಾ ಸೇನೆ - ಗಡಿಯಿಂದ ಹಿಂದೆ ಸರಿದ ಉಭಯ ಸೇನೆಗಳು

ಪೂರ್ವ ಲಡಾಖ್‌ ಗಡಿಯಿಂದ ಭಾರತ ಹಾಗೂ ಚೀನಾ ಸೇನೆಗಳು 2.5 ಕಿ.ಮೀಟರ್‌ನಷ್ಟು ಹಿಂದೆ ಸರಿದಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಳೆದ ಹಲವು ದಿನಗಳಿಂದ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಯಲ್ಲಿ ಉಂಟಾಗಿದ್ದ ಉದ್ವಿಗ್ನ ವಾತಾವರಣಕ್ಕೆ ಈ ಮಹತ್ವದ ಬೆಳವಣಿಗೆಯ ಮೂಲಕ ಕೊಂಚ ವಿರಾಮ ದೊರೆತಿದೆ.

india-and-china-disengage-in-eastern-ladakh-pull-back-troops
ಸೇನಾ ಮಟ್ಟದ ಮಾತುಕತೆ ಬೆನ್ನಲ್ಲೇ 2.5 ಕಿ.ಮೀ ಹಿಂದೆ ಸರಿದ ಭಾರತ, ಚೀನಾ ಸೇನೆಗಳು

By

Published : Jun 9, 2020, 5:32 PM IST

ಲಡಾಖ್‌: ಪೂರ್ವ ಲಡಾಖ್‌ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನ ವಾತಾವರಣ ತಿಳಿಯಾಗುವ ಮಹತ್ವದ ಸೂಚನೆ ಸಿಕ್ಕಿದೆ. ಕಳೆದ ಶನಿವಾರ ಭಾರತ-ಚೀನಾ ಸೇನಾ ಅಧಿಕಾರಿಗಳ ಮಾತುಕತೆ ನಡೆದ ಬೆನ್ನಲ್ಲೇ ಇಂದು ಉಭಯ ಸೇನೆಗಳು ತಮ್ಮ ಸಿಬ್ಬಂದಿ ಹಾಗೂ ಯುದ್ಧ ವಾಹನಗಳನ್ನು 2.5 ಕಿಲೋ ಮೀಟರ್‌ನಷ್ಟು ಹಿಂದಕ್ಕೆ ಕರೆದುಕೊಂಡಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಹಲವು ದಿನಗಳ ಬಳಿಕ ಚೀನಾದ ಪೀಪಲ್ಸ್‌ ಲಿಬರೇಷನ್‌ ಸೇನೆ ಗಲ್ವಾನ್‌ ಪ್ರದೇಶದಿಂದ 2.5 ಕಿ.ಮೀ ನಷ್ಟು ಹಿಂದೆ ಸರಿದಿದೆ. ಭಾರತ ಕೂಡ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ.

ABOUT THE AUTHOR

...view details