ಲಂಡನ್: ಬ್ರಿಟನ್ ಪ್ರಧಾನಿ ತೆರೇಸಾ ಮೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಉಗ್ರರ ದಮನಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇಮ್ರಾನ್ ಖಾನ್ಗೆ ಕರೆ ಮಾಡಿದ ಬ್ರಿಟನ್ ಪ್ರಧಾನಿ... ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ - ಉಗ್ರರ ದಮನ
ಉಗ್ರರ ನಿರ್ಮೂಲನೆ ವಿಚಾರವಾಗಿ ಉಭಯ ದೇಶಗಳ ಪ್ರಧಾನಿಗಳು ಗಂಭೀರ ಮಾತುಕತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಸಹಾಯವೂ ಅಗತ್ಯವಿದೆ ಎಂದು ತೆರೇಸಾ ಮೇ ಅಭಿಪ್ರಾಯಪಟ್ಟಿದ್ದಾರೆ.
ತೆರೇಸಾ ಮೇ
ವಿಂಗ್ ಕಮಾಂಡರ್ ಅಭಿನಂದನ್ರನ್ನು ಬಿಡುಗಡೆ ಮಾಡಿದ ವಿಚಾರವನ್ನು ಬ್ರಿಟನ್ ಪ್ರಧಾನಿ ಸ್ವಾಗತಿಸಿದ್ದು, ಉಭಯ ದೇಶಗಳಲ್ಲಿ ಶಾಂತಿ ಮರು ಸ್ಥಾಪಿಸುವ ಇಮ್ರಾನ್ ಖಾನ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪುಲ್ವಾಮಾದಲ್ಲಿನ ಉಗ್ರರ ದಾಳಿ ಬಳಿಕ ಪಾಕಿಸ್ತಾನಕ್ಕೆ ಜಾಗತಿಕಮಟ್ಟದಲ್ಲಿ ಹೆಚ್ಚಿನ ಒತ್ತಡ ಉಂಟಾಗಿದ್ದು, ಈ ನಿಟ್ಟಿನಲ್ಲಿ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಒಪ್ಪಿಗೆ ಸೂಚಿಸಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.