ಕರ್ನಾಟಕ

karnataka

ETV Bharat / international

ಶ್ರೀಲಂಕಾ ಸಂಸತ್ತಿನಲ್ಲಿ ಇಮ್ರಾನ್​ ಖಾನ್​ ಭಾಷಣ ರದ್ದು - ಶ್ರೀಲಂಕಾ ಸಂಸತ್ತಿನಲ್ಲಿ ಇಮ್ರಾನ್​ ಖಾನ್​ ಭಾಷಣರದ್ದು

ಕೋವಿಡ್ ಹಿನ್ನೆಲೆ ಸ್ಪೀಕರ್ ಮಹಿಂದಾ ಯಪ ಅಬೆಯವರ್ಧನ ಅವರ ಕೋರಿಕೆ ಮೇರೆಗೆ ಶ್ರೀಲಂಕಾ ಸಂಸತ್ತಿನಲ್ಲಿ ಇಮ್ರಾನ್​ ಖಾನ್​ ಭಾಷಣವನ್ನು ರದ್ದುಗೊಳಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಜಯನಾಥ್ ಕೊಲಂಬೇಜ್ ಹೇಳಿರುವುದಾಗಿ ಡೈಲಿ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.

Imran Khan
ಇಮ್ರಾನ್​ ಖಾನ್​

By

Published : Feb 18, 2021, 5:58 PM IST

ಇಸ್ಲಮಾಬಾದ್​:ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಅವರು ತಮ್ಮ ಕೊಲಂಬೊ ಪ್ರವಾಸದ ವೇಳೆ ಶ್ರೀಲಂಕಾ ಸಂಸತ್ತಿನಲ್ಲಿ ಮಾಡಬೇಕಿದ್ದ ಭಾಷಣವನ್ನು ಅಲ್ಲಿನ ಸರ್ಕಾರ ರದ್ದುಗೊಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಫೆಬ್ರವರಿ 22 ರಿಂದ ಇಮ್ರಾನ್​ ಖಾನ್ ಎರಡು ದಿನಗಳ ಕಾಲ ಕೊಲಂಬೊ ಪ್ರವಾಸ ಕೈಗೊಂಡಿರುವುದಾಗಿ ಡಾನ್ ಪತ್ರಿಕೆ ಗುರುವಾರ ವರದಿ ಮಾಡಿದೆ.

ಈಗಾಗಲೇ ನಿಗದಿಯಾಗಿರುವಂತೆ ಪಾಕಿಸ್ತಾನ ಪ್ರಧಾನಿಯವರ ಕೊಲಂಬೊ ಪ್ರವಾಸ ಮುಂದುವರೆಯಲಿದೆ. ಆದರೆ ಅವರ ಉದ್ದೇಶಿತ ಸಂಸತ್ತಿನ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕೋವಿಡ್ ಹಿನ್ನೆಲೆ ಸ್ಪೀಕರ್ ಮಹಿಂದಾ ಯಪ ಅಬೆಯವರ್ಧನ ಅವರ ಕೋರಿಕೆ ಮೇರೆಗೆ ಇಮ್ರಾನ್​ ಖಾನ್​ ಭಾಷಣವನ್ನು ರದ್ದುಗೊಳಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಜಯನಾಥ್ ಕೊಲಂಬೇಜ್ ಹೇಳಿದ್ದಾರೆ ಎಂದು ಶ್ರೀಲಂಕಾದ ಡೈಲಿ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ABOUT THE AUTHOR

...view details