ಕರ್ನಾಟಕ

karnataka

ETV Bharat / international

ನಾಜಿ ಸಿದ್ಧಾಂತದ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ಮಾರಕ: ಇಮ್ರಾನ್ ಖಾನ್ - ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಸರಣಿ ಟ್ವೀಟ್

ಸದ್ಯ ಅಣು ಬಾಂಬ್​ ಬಗೆಗಿನ ವಿಚಾರಕ್ಕೆ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಸರಣಿ ಟ್ವೀಟ್ ಮೂಲಕ ಆತಂಕ ಹೊರಹಾಕಿದ್ದಾರೆ. ಮೋದಿ ಸರ್ಕಾರದ ನಡೆಯನ್ನು ಟ್ವೀಟ್ ಮೂಲಕ ಟೀಕಿಸಿದ್ದಾರೆ.

ಇಮ್ರಾನ್ ಖಾನ್

By

Published : Aug 18, 2019, 3:23 PM IST

ಇಸ್ಲಾಮಾಬಾದ್:ಕಾಶ್ಮೀರ ವಿಚಾರದಲ್ಲಿ ಮತ್ತೆ ದನಿ ಎತ್ತಿರುವ ಪಾಕಿಸ್ತಾನಕ್ಕೆ ಕೆಲ ದಿನಗಳ ಹಿಂದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ನ್ಯೂಕ್ಲಿಯರ್​ ಬಾಂಬ್ ಪಾಲಿಸಿಯ ಬಗ್ಗೆ ಹೇಳಿಕೆ ನೀಡಿ ಸೊಲ್ಲಡಗಿಸುವ ಪ್ರಯತ್ನ ಮಾಡಿದ್ದರು. ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕಾಶ್ಮೀರ ಸಮಸ್ಯೆಗೆ ಯುದ್ಧ ಒಂದೇ ಪರಿಹಾರ: ಪಾಕ್ ರಾಯಭಾರಿ

ಸದ್ಯ ಅಣು ಬಾಂಬ್​ ಬಗೆಗಿನ ವಿಚಾರಕ್ಕೆ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಸರಣಿ ಟ್ವೀಟ್ ಮೂಲಕ ಆತಂಕ ಹೊರಹಾಕಿದ್ದಾರೆ. ಮೋದಿ ಸರ್ಕಾರದ ನಡೆಯನ್ನು ಟ್ವೀಟ್ ಮೂಲಕ ಟೀಕಿಸಿದ್ದಾರೆ.

ನಮ್ಮ ಮುಂದಿನ ಗುರಿ ಪಿಒಕೆ! ರಕ್ಷಣಾ ಸಚಿವರ ಖಡಕ್ ಮಾತು

ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳು ಭಾರತದ ಅಣ್ವಸ್ತ್ರ ಸಂಗ್ರಹದಿಂದ ಭದ್ರತೆಯನ್ನು ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಮೋದಿ ಸರ್ಕಾರ ಹಿಂದೂಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿರುವ ಅಲ್ಪಸಂಖ್ಯಾತರಿಗೆ ಹಾಗೂ ಪಾಕಿಸ್ತಾನ ಮೋದಿ ಸರ್ಕಾರ ಬೆದರಿಕೆ ಒಡ್ಡಿದೆ ಎಂದು ಪಾಕ್ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ, ನಾಜಿ ಸಿದ್ಧಾಂತಗಳು ಹಾಗೂ ಆರೆಸ್ಸೆಸ್​-ಬಿಜೆಪಿ ಸಿದ್ಧಾಂತಗಳು ಒಂದೇ ಆಗಿದ್ದು ಇದು ಪಾಕಿಸ್ತಾನದೊಂದಿಗಿನ ಬಾಂಧವ್ಯಕ್ಕೆ ತೊಡಕು ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಸದ್ಯದ ಬೆಳವಣಿಗೆ ಬಗ್ಗೆ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ, ಭಾರತದ ದಾಳಿ ಎದುರಿಸಲು ನಾವು ಸರ್ವ ಸನ್ನದ್ಧವಾಗಿದ್ದೇವೆ ಎಂದು ಯುದ್ದಕ್ಕೆ ಪರೋಕ್ಷ ಆಹ್ವಾನ ನೀಡಿದ್ದಾರೆ.

ABOUT THE AUTHOR

...view details