ಇಸ್ಲಮಾಬಾದ್(ಪಾಕಿಸ್ತಾನ):ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತನ್ನೊಂದಿಗೆ ಸಂಭೋಗ ನಡೆಸಲು ಬಯಸಿದ್ದಾಗಿ ಪಾಕ್ ಮೂಲದ ಅಮೆರಿಕಾ ಬ್ಲಾಗರ್ ಸಿಂಥಿಯಾ ಡಾನ್ ರಿಚ್ಚಿ ಒಮ್ಮೆ ಹೇಳಿದ್ದಳು ಎಂದು ಪಾಕಿಸ್ತಾನದ ಟಿವಿ ನಿರೂಪಕಿ ಅಲಿ ಸಲೀಮ್ ಅಲಿಯಾನ್ ಬೇಗಂ ನವಾಜಿಶ್ ಅಲಿ ಗುಪ್ತ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ರಿಚ್ಚಿ ಒಂದು ಕಾಲದಲ್ಲಿ ಇಮ್ರಾನ್ ಖಾನ್ ಅವರಿಗೆ ತುಂಬಾ ಆಪ್ತಳಾಗಿದ್ದಳು. ಈ ಹಿಂದೆ ಅವರೊಂದಿಗೆ ಕೋಣೆಯನ್ನೂ ಹಂಚಿಕೊಂಡಿದ್ದಳು ಎಂದು ಅಲಿ ಸಲೀಮ್ ಹೇಳಿದ್ದಾರೆ. ಈ ಸಮಯದಲ್ಲಿ ಆಕೆ ಅವರೊಂದಿಗೆ ವಿಶ್ವಾಸ ಹೊಂದಿದ್ದಳು ಮತ್ತು ಇಮ್ರಾನ್ ಖಾನ್ ಅವಳೊಂದಿಗೆ ಸಂಭೋಗ ನಡೆಸಲು ಪ್ರಸ್ತಾಪಿಸಿದ್ದಾಗಿ ಹೇಳಿದ್ದಳು ಎಂದು ಅಲಿ ಸಲೀಮ್ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.