ಕರ್ನಾಟಕ

karnataka

ETV Bharat / international

ಶಹ್ಬಾಜ್​ ಶರೀಫರನ್ನು ಪ್ರಧಾನಿ ಇಮ್ರಾನ್​ ಖಾನ್​ ಭಯದಿಂದ ಬಂಧಿಸಿದ್ದಾರೆ: ಮರಿಯಂ ಆರೋಪ - ಶಹ್ಬಾಜ್​ ಶರೀಫ್​ ಬಂಧನ,

ಶಹ್ಬಾಜ್​ ಶರೀಫರನ್ನು ಪ್ರಧಾನಿ ಇಮ್ರಾನ್​ ಖಾನ್​ ಭಯದಿಂದ ಬಂಧಿಸಿದ್ಧಾರೆ ಎಂದು ಪಿಎಂಎಲ್-ಎನ್ ವಕ್ತಾರ ಮರಿಯಂ ಆರೋಪಿಸಿದ್ದಾರೆ.

Imran Khan ordered the arrest of Shahbaz Sharif, Imran Khan ordered the arrest of Shahbaz Sharif out of fear, Shahbaz Sharif arrest, Shahbaz Sharif arrest news, ಶಹ್ಬಾಜ್​ ಶರೀಫ್​ ಬಂಧನ, ಭಯದಿಂದ ಶಹ್ಬಾಜ್​ ಶರೀಫ್​ ಬಂಧನ, ಇಮ್ರಾನ್​ ಖಾನ್​ ಶಹ್ಬಾಜ್​ ಶರೀಫ್​ ಬಂಧಿಸಿದ್ದಾರೆ, ಶಹ್ಬಾಜ್​ ಶರೀಫ್​ ಬಂಧನ, ಶಹ್ಬಾಜ್​ ಶರೀಫ್​ ಬಂಧನ ಸುದ್ದಿ,
ಶಹ್ಬಾಜ್​ ಶರೀಫರನ್ನು ಪ್ರಧಾನಿ ಇಮ್ರಾನ್​ ಖಾನ್​ ಭಯದಿಂದ ಬಂಧಿಸಿದ್ಧಾರೆ

By

Published : Nov 11, 2020, 12:25 PM IST

ಲಾಹೋರ್:ಪಿಎಂಎಲ್-ಎನ್ ಅಧ್ಯಕ್ಷ ಶಹ್ಬಾಜ್ ಶರೀಫ್​ರನ್ನು ಪ್ರಧಾನಿ ಇಮ್ರಾನ್ ಖಾನ್ ಭಯದಿಂದ ಬಂಧಿಸಿದ್ದಾರೆ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ವಕ್ತಾರ ಮರಿಯಂ ಔರಂಗಜೇಬ್ ಆರೋಪಿಸಿದ್ದಾರೆ.

ಶಹ್ಬಾಜ್​ ಬಂಧನ ಬಗ್ಗೆ ಮಾತನಾಡಿರುವ ಮರಿಯಂ, ಪಾಕಿಸ್ತಾನದ ಜನರು ಅನ್ನ-ನೀರು ಸ್ವೀಕರಿಸಲಿಲ್ಲ. ಆರ್ಥಿಕತೆಯು ಸ್ಥಿರವಾಗಿಲ್ಲ. ಔಷಧ, ವಿದ್ಯುತ್ ಮತ್ತು ಅನಿಲ ದರಗಳು ಕಡಿಮೆಯಾಗಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಜನರಿಗೆ ಉದ್ಯೋಗ ಸಿಗುತ್ತಿಲ್ಲವೆಂದು ಅವರು ಹೇಳಿದರು.

ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಜಹಾಂಗೀರ್ ತರೀನ್​ರನ್ನು ಗುರಿಯಾಗಿಸಿ ಮಾತನಾಡಿದ ಮರಿಯಂ, ಅವರು ‘ಅನ್ನ ಮತ್ತು ಸಕ್ಕರೆ ಕಳ್ಳ’. ಸಾರ್ವಜನಿಕರು ಆತನ ದ್ರೋಹಗಳ ಬಗ್ಗೆ ಮರೆತಿಲ್ಲ. 23 ವಿದೇಶಿಗಳಿಗೆ ಹಣ ವರ್ಗಾಯಿಸಿದ ಪ್ರಕರಣಗಳನ್ನು ಜನರು ಮರೆತಿಲ್ಲ ಎಂದು ಒತ್ತಿ ಹೇಳಿದರು.

ಸೆಪ್ಟೆಂಬರ್‌ನಲ್ಲಿ ಲಾಹೋರ್ ಹೈಕೋರ್ಟ್‌ನಿಂದ ಹಣ ವರ್ಗಾವಣೆ ಪ್ರಕರಣದಲ್ಲಿ ಶರೀಫ್‌ನನ್ನು ಬಂಧಿಸಲಾಗಿತ್ತು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಹಣ ವರ್ಗಾವಣೆ ಮತ್ತು ಆದಾಯದ ಮೂಲಗಳನ್ನು ಮೀರಿ ಸ್ವತ್ತುಗಳನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಶರೀಫ್​ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಎನ್‌ಎಬಿ ಅಧಿಕಾರಿಗಳು ಆತನನ್ನು ಮತ್ತೆ ವಶಕ್ಕೆ ಪಡೆದರು.

ABOUT THE AUTHOR

...view details