ಕರ್ನಾಟಕ

karnataka

ETV Bharat / international

ಸಂಬಂಧ ವೃದ್ದಿಗೆ ಮೋದಿ ಮಹತ್ವದ ನಿರ್ಧಾರ ತೆಗೆದುಕೊಳ್ತಾರೆ: ಇಮ್ರಾನ್ ಖಾನ್ ವಿಶ್ವಾಸ - undefined

ಉಭಯ ದೇಶಗಳು ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಗಮನ ಹರಿಸಬೇಕು. ಎರಡೂ ಸರ್ಕಾರಗಳು ಮನಸ್ಸು ಮಾಡಿದರೆ ಕಾಶ್ಮೀರ ವಿವಾದ ಕೂಡ ಬಗೆಹರಿಯುತ್ತದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಷ್ಯಾದ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

Imran Khan

By

Published : Jun 13, 2019, 7:28 PM IST

ರಷ್ಯಾ:ಲೋಕಸಭೆ ಚುನಾವಣೆಯಲ್ಲಿ ಅಮೋಘ ಯಶಸ್ಸು ಸಾಧಿಸಿರುವ ಮೋದಿ, ಪಾಕ್ ಜತೆಗಿನ ಸಂಬಂಧ ವೃದ್ಧಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ತಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಭಯ ದೇಶಗಳು ಮಾತುಕತೆ ಮೂಲಕ ಶಾಂತಿ ಸ್ಥಾಪಿನೆಗೆ ಗಮನ ಹರಿಸಬೇಕು. ಎರಡೂ ಸರ್ಕಾರಗಳು ಮನಸ್ಸು ಮಾಡಿದರೆ ಕಾಶ್ಮೀರ ವಿವಾದವೂ ಬಗೆಹರಿಯುತ್ತದೆ ಎಂದು ಖಾನ್​, ರಷ್ಯಾದ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಆದರೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಂಬಂಧ ಭಾರತದ ಜತೆ ಮಾತುಕತೆ ನಡೆಸಲು ನಾವು ವಿಫಲರಾಗಿದ್ದೇವೆ. ಈಗಿನ ಪ್ರಧಾನಿ ಮಹತ್ವದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿಶ್ವಾಸವಿದೆ ಎಂದೂ ಹೇಳಿದ್ದಾರೆ.

ಚುನಾವಣೆ ಪೂರ್ವದಲ್ಲಿ ಈ ಎಲ್ಲಾ ಪ್ರಯತ್ನಗಳನ್ನು ನಾನು ಮಾಡಿದ್ದೆ. ಆದರೆ ಪ್ರಧಾನಿ ಮೋದಿ ಅವರ ಪಕ್ಷದವರು ಜನರಲ್ಲಿ ಪಾಕಿಸ್ತಾನ ವಿರೋಧಿ ಮನೋಭಾವನೆ ಮೂಡಿಸಿದ್ದರು. ಹಾಗಾಗಿ ನಮ್ಮ ಪ್ರಯತ್ನಕ್ಕೆ ಅವಕಾಶವೇ ಸಿಗಲಿಲ್ಲ ಎಂದರು.

ಪಾಕಿಸ್ತಾನವು ಶಾಂತಿ ಮೂಲಕ ಪ್ರಗತಿಯನ್ನು ಬಯಸುತ್ತದೆ. ಆದರೆ ಎರಡು ದೇಶಗಳ ನಡುವೆ ಉದ್ವಿಗ್ನ ವಾತಾವರಣ ಉಂಟಾದಾಗ ಜನರು ಬಲಿಯಾಗುತ್ತಿದ್ದಾರೆ. ಅವರು ಮೊದಲು ಶಸ್ತ್ರಾಸ್ತ್ರಗಳ ಬಳಕೆ ನಿಲ್ಲಿಸಬೇಕಿದೆ. ಹಾಗಾಗಿ ನಮಗೆ ಮಧ್ಯವರ್ತಿಗಳ ಅವಶ್ಯಕತೆಯೂ ಇದೆ ಎಂದು ರಷ್ಯಾ ಮಧ್ಯಸ್ಥಿಕೆ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

For All Latest Updates

TAGGED:

ABOUT THE AUTHOR

...view details