ಇಸ್ಲಾಮಾಬಾದ್:ಕಾಶ್ಮೀರ ವಿಚಾರದಲ್ಲಿ ತುಸು ಹೆಚ್ಚೇ ತಲೆಕೆಡಿಸಿಕೊಂಡಿರುವ ನೆರೆರಾಷ್ಟ್ರ ಪಾಕಿಸ್ತಾನ ಇದೀಗ ಭಾರತಕ್ಕೆ ತನ್ನ ವಾಯುಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲು ತೀರ್ಮಾನಿಸಿದೆ.
'ಮೋದಿಯಿಂದ ಆರಂಭ, ನಮ್ಮಿಂದಲೇ ಮುಕ್ತಾಯ'.. ಪಾಕ್ ಸಚಿವನ ಟ್ವೀಟ್.. - Article 370
ಬಾಲಾಕೋಟ್ ವಾಯುದಾಳಿಯ ಬಳಿಕ ಭಾರತದ ವಿಮಾನಗಳಿಗೆ ತನ್ನ ವಾಯುಮಾರ್ಗವನ್ನು ಮುಚ್ಚಿದ್ದ ಪಾಕಿಸ್ತಾನ ಕೆಲ ತಿಂಗಳ ಹಿಂದೆ ಹಿಂಪಡೆದಿತ್ತು. ಆದರೆ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಾಲಾಕೋಟ್ ವಾಯುದಾಳಿಯ ಬಳಿಕ ತನ್ನ ಭಾರತದ ವಿಮಾನಗಳಿಗೆ ತನ್ನ ವಾಯುಮಾರ್ಗವನ್ನು ಮುಚ್ಚಿದ್ದ ಪಾಕಿಸ್ತಾನ ಕೆಲ ತಿಂಗಳ ಹಿಂದೆ ಹಿಂಪಡೆದಿತ್ತು. ಆದರೆ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ವಾಯುಮಾರ್ಗವನ್ನು ಬಂದ್ ಮಾಡುವುದರ ಜೊತೆಗೆ ಆಫ್ಘಾನಿಸ್ತಾನದ ವಾಣಿಜ್ಯ ಮಾರ್ಗವನ್ನು ಬಂದ್ ಮಾಡಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಟ್ವೀಟ್ ಮಾಡಿದ್ದಾರೆ.
"ಭಾರತಕ್ಕೆ ತನ್ನ ವಾಯುಮಾರ್ಗವನ್ನು ಸಂಪೂರ್ಣ ಬಂದ್ ಮಾಡಲು ಪಾಕಿಸ್ತಾನ ಪ್ರಧಾನಿ ಚಿಂತನೆ ನಡೆಸಿದ್ದಾರೆ. ಭಾರತದಿಂದ ಆಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಮೂಲಕ ನಡೆಯುವ ಎಲ್ಲ ವಾಣಿಜ್ಯ ವ್ಯವಹಾರವನ್ನು ಇದೇ ವೇಳೆ ಬಂದ್ ಮಾಡುವ ವಿಚಾರವನ್ನೂ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಸದ್ಯಕ್ಕೆ ಈ ವಿಚಾರವನ್ನು ಜಾರಿಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮೋದಿ ಶುರು ಮಾಡಿದ್ದನ್ನು ನಾವು ಮುಕ್ತಾಯಗೊಳಿಸುತ್ತಿದ್ದೇವೆ" ಎಂದು ಫವಾದ್ ಹುಸೇನ್ ಟ್ವೀಟ್ ಮಾಡಿದ್ದಾರೆ.