ಕರ್ನಾಟಕ

karnataka

ETV Bharat / international

ಚೀನಾ ನೀಡಿದ ಸಾಲದ ವಿವರ ತಿಳಿಸಿ- ಪಾಕ್​ಗೆ IMF​ ತಾಕೀತು - undefined

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಚೀನಾದ ಸಾಲ ನೀಡಿಕೆ ಪ್ರಮಾಣವು ಹೆಚ್ಚಾಗುತ್ತಿದೆ. ಸಾಲದ ಹೊರೆಯು ಭವಿಷ್ಯದಲ್ಲಿ ಗಂಭೀರ ಬಿಕ್ಕಟ್ಟುಗಳಿಗೆ ಕಾರಣವಾಗಬಹುದು ಎಂದು ಐಎಂಎಫ್​ ಈ ಹಿಂದೆ ಕಳವಳ ವ್ಯಕ್ತಪಡಿಸಿತ್ತು.

ಸಾಂದರ್ಭಿಕ ಚಿತ್ರ

By

Published : Apr 13, 2019, 11:14 PM IST

ಇಸ್ಲಾಮಾಬಾದ್​:ಆರ್ಥಿಕ ಸಹಕಾರ ಒಪ್ಪಂದದಡಿ ಚೀನಾದಿಂದ ಇದುವರೆಗೂ ಪಡೆದ ಸಾಲದ ವಿವರ ಸಲ್ಲಿಸುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

ಪಾಕ್‌ನ ಎಕ್ಸ್​ಪ್ರೆಸ್​ ಟ್ರಿಬ್ಯೂನ್ ಪತ್ರಿಕಾ ವರದಿಯ ಅನ್ವಯ, ಬೀಜಿಂಗ್​ ಹಣಕಾಸು ಒಪ್ಪಂದದಲ್ಲಿ ಪಾಕಿಸ್ತಾನಕ್ಕೆ ಚೀನಾ ನೀಡುತ್ತಿರುವ ಆರ್ಥಿಕ ಸಹಕಾರದ ಬಗ್ಗೆ ಎಂಎಂಎಫ್ ತೀವ್ರ​ ಕಳವಳ ವ್ಯಕ್ತಪಡಿಸಿದೆ.

ಅದಾಗಿಯೂ, ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ (ಸಿಪಿಇಸಿ) ಹಾಗೂ ಐಎಂಎಫ್ ನೀಡಿದ್ದ ಬೇಲ್‌ಔಟ್ ಪ್ಯಾಕೇಜ್​ ಬಗ್ಗೆ ಯಾವುದೇ ಆಕ್ಷೇಪವಿಲ್ಲ ಎಂದು ಐಎಂಎಫ್​ ಭರವಸೆ ನೀಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನ ಮತ್ತು ಐಎಂಎಫ್ ಮುಂಬರುವ ದಿನಗಳಲ್ಲಿ ಸಂಪೂರ್ಣ ಒಪ್ಪಂದಕ್ಕೆ ಬರಲಿದ್ದು, ಈ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದೇವೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಅಸದ್ ಉಮರ್ ಹೇಳಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಈ ಬಗ್ಗೆ ತಿಳಿದುಕೊಳ್ಳವ ಪ್ರಯತ್ನ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಒಪ್ಪಂದದ ಆದೇಶವನ್ನು ತಲುಪಿಸಿ ಸಂಪೂರ್ಣ ಮಾಹಿತಿ ಪಡೆದ ಬಳಿಕ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಐಎಂಎಫ್​ನ ಹಣಕಾಸು ಸಚಿವ ವಿಶ್ವಬ್ಯಾಂಕ್​ ಗ್ರೂಪ್​ನ ಅಧ್ಯಕ್ಷ ಡೇವಿಡ್ ಆರ್ ಮಾಲ್ಪಾಸ್​ ಅವರಿಗೆ ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನ- ಚೀನಾ ಸುಮಾರು 6.2 ಬಿಲಿಯನ್ ಡಾಲರ್ ಮೊತ್ತದ 6ಕ್ಕೂ ಅಧಿಕ ಯೋಜನೆಗಳ ಒಪ್ಪಂದಕ್ಕೆ ಸಹಿ ಹಾಕಿವೆ. ಇದಲ್ಲದೇ ಚೀನಾ, ಪಾಕಿಸ್ತಾನಕ್ಕೆ 6.5 ಬಿಲಿಯನ್ ಡಾಲರ್ ಮೊತ್ತದ ವಾಣಿಜ್ಯ ಸಾಲವನ್ನೂ ನೀಡಿದೆ.

ಅಂತಾರಾಷ್ಟ್ರೀಯ ಸಾಲ ನೀಡಿಕೆಯ ನಿಯಮಗಳನ್ನು ಅನುಸರಿಸದೆ ಚೀನಾದ ಸಾಲ ನೀಡಿಕೆಯ ಪ್ರಮಾಣ ಹೆಚ್ಚಾಗುತ್ತಿದೆ. ದೇಶಗಳು ಭವಿಷ್ಯದಲ್ಲಿ ಸಾಲ ತೀರಿಸುವ ಪ್ರಯತ್ನದ ಬಗ್ಗೆ ಚಿಂತಿಸುತ್ತಿಲ್ಲ. ಸಾಲದ ಹೊರೆಯು ಭವಿಷ್ಯದಲ್ಲಿ ಕಳವಳಕಾರಿ ಬಿಕ್ಕಟ್ಟುಗಳಿಗೆ ಬೀಜವಾಗಬಹುದು ಎಂದು ಐಎಂಎಫ್ ಚೀನಾಗೆ ಎಚ್ಚರಿಸಿತ್ತು. ಇದರ ಬೆನ್ನಲ್ಲೇ ಪಾಕ್​ಗೆ ಸಾಲದ ಮಾಹಿತಿ ನೀಡುವಂತೆ ತಾಕೀತು ಮಾಡಿದೆ.

For All Latest Updates

TAGGED:

ABOUT THE AUTHOR

...view details