ನ್ಯೂಯಾರ್ಕ್:ಅಮೆರಿಕದಲ್ಲಿ ಕೊರೊನ ಸೋಂಕಿಗೆ ಇಲ್ಲಿಯವರೆಗೆ ಬರೋಬ್ಬರಿ 20 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಚೀನಾದಲ್ಲಿ ಹುಟ್ಟಿಕೊಂಡ ಈ ಮಹಾಮಾರಿ 195ಕ್ಕೂ ಹೆಚ್ಚು ದೇಶಗಳಲ್ಲಿ ಲಗ್ಗೆ ಹಾಕಿದ್ದು, ಅಮೆರಿಕದಲ್ಲಿ ಮಾತ್ರ ಅತಿ ವೇಗವಾಗಿ ವೈರಸ್ ಹರಡುತ್ತಿದೆ. ಇಲ್ಲಿಯವರೆಗಿನ ಮಾಹಿತಿ ಪ್ರಕಾರ 20 ಸಾವಿರ ಮಂದಿ ಮರಣ ಹೊಂದಿದ್ದು, 1600 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 5,04,780ಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದು, ಹೆಚ್ಚಿನ ಸಾವು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.
ಈ ಮಹಾಮಾರಿಗೆ ನ್ಯೂಯಾರ್ಕ್ ನಗರದಲ್ಲೇ ಹೆಚ್ಚು ಸೋಂಕಿತರು ಬಲಿಯಾಗಿದ್ದು, ಇದೀಗ 1,59,937 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಉಳಿದಂತೆ ಕ್ಯಾಲಿಫೋರ್ನಿಯಾ, ಮಿಚಿಗನ್ ಸಿಟಿಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.