ಕರಾಚಿ(ಪಾಕಿಸ್ತಾನ) : ಮಹಿಳೆರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಪಾಕಿಸ್ತಾನದ ಮಾನವ ಹಕ್ಕುಗಳ ಗುಂಪುಗಳು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸಿವೆ.
ಗುರುವಾರ ಸುದ್ದಿಗೋಷ್ಠಿ ನಡೆಸಿದ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (ಎಚ್‌ಆರ್‌ಸಿಪಿ), ವಿಮೆನ್ ಆ್ಯಕ್ಷನ್ ಫೋರಂ, ತೆಹ್ರಿಕ್-ಎ-ನಿಸ್ವಾನ್, ಔರತ್ ಮಾರ್ಚ್ ಮತ್ತು ಪಾಕಿಸ್ತಾನ ಕಾರ್ಮಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ಕನಿಷ್ಠ 16 ಸಂಸ್ಥೆಗಳು ಇಮ್ರಾನ್ ಖಾನ್ ಅವರನ್ನು ತೀವ್ರವಾಗಿ ಖಂಡಿಸಿವೆ.
ಪಾಕಿಸ್ತಾನ ಆಡಳಿತ ಪಕ್ಷದ ಹಲವಾರು ಮಹಿಳಾ ಸದಸ್ಯರು ಇಮ್ರಾನ್ ಖಾನ್ ರಕ್ಷಣೆಗೆ ಮುಂದಾಗಿದ್ದು, ಅಸ್ಪಷ್ಟ, ತರ್ಕಬದ್ಧವಲ್ಲದ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದು ತುಂಬಾ ನಿರಾಶಾದಾಯಕವಾಗಿದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಬೇಸರ ವ್ಯಕ್ತಪಡಿಸಿದೆ.