ಹೈದರಾಬಾದ್: ಕೃತಕ ಬುದ್ಧಿಮತ್ತೆ, ಸ್ಮಾರ್ಟ್‌ಫೋನ್‌ಗಳು ಮತ್ತು ಬಿಗ್ ಡೇಟಾವನ್ನು ಬಳಸಿಕೊಂಡು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ದಕ್ಷಿಣ ಕೊರಿಯಾ, ತೈವಾನ್ ಮತ್ತು ಚೀನಾ ಯಶಸ್ವಿಯಾಗಿವೆ. ಈ ದೇಶಗಳ ಕ್ರಮದಿಂದ ಪ್ರಪಂಚದ ಉಳಿದ ಭಾಗಗಳು ಕಲಿಯಲು ತುಂಬಾ ವಿಷಯ ಇದೆ.
ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿರತ ಸಂಖ್ಯೆ ಹೆಚ್ಚಾಗಿದ್ದರೂ ಸಾವಿನ ಸಂಖ್ಯೆ ತೀರಾ ಕಡಿಮೆ. ಚೀನಾ ಪಕ್ಕದಲ್ಲಿರುವ ತೈವಾನ್‌ನಲ್ಲಿ ಇನ್ನೂ ಕಡಿಮೆ ಸಾವಿನ ಸಂಖ್ಯೆ ದಾಖಲಾಗಿದೆ. ದಕ್ಷಿಣ ಕೊರಿಯಾ ಸರ್ಕಾರವು ರೋಗಿಗಳ ಸಂಖ್ಯೆ, ಅವರು ವಾಸಿಸುತ್ತಿದ್ದ ಪ್ರದೇಶಗಳು, ಅವರ ಲಿಂಗ ಮತ್ತು ವಯಸ್ಸು, ಸಾವಿನ ಸಂಖ್ಯೆ ಕುರಿತು ಮಾಹಿತಿ ಸಂಗ್ರಹಿಸಲು ಬಿಗ್ ಡೇಟಾವನ್ನು ಬಳಸುತ್ತಿದೆ. ಸಂತ್ರಸ್ತರಿಗೆ ವಿಶೇಷ ಗುರುತಿನ ನಂಬರ್ ನೀಡುತ್ತಿತ್ತು ಮತ್ತು ಸಂಗ್ರಹಿಸಿದ ಮಾಹಿತಿಯನ್ನು ಗುಪ್ತವಾಗಿಡಲಾಗುತ್ತಿತ್ತು.
ದಕ್ಷಿಣ ಕೊರಿಯಾದ ಕರೋನಾ ಬುಲೆಟಿನ್ ಉದಾಹರಣೆ:102 ಸಂಖ್ಯೆಯ ರೋಗಿ ಆವರ ಸ್ನೇಹಿತನೊಂದಿಗೆ ಇಂತಾ ಚಿತ್ರಮಂದಿರದ ಇಂತಾ ಆಸನಗಳಲ್ಲಿ ಕುಳಿತು ಚಿತ್ರ ವೀಕ್ಷಣೆ ಮಾಡಿದರು. ಅವರು ಟ್ಯಾಕ್ಸಿಯಲ್ಲಿ ಥಿಯೇಟರ್ ತಲುಪಿದರು.151 ಸಂಖ್ಯೆಯ ರೋಗಿ ಇಂತಾ ರೆಸ್ಟೋರೆಂಟ್ನಲ್ಲಿ ಊಟ ಮಾಡಿದರು. 587 ಸಂಖ್ಯೆಯ ರೋಗಿ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿ ಪಾರ್ಟಿಗೆ ಹೋದರು, ಅಲ್ಲಿ ಅವರು 20 ಜನರನ್ನು ಭೇಟಿಯಾದರು. ಎಂದು ಮಾಹಿತಿ ಸಂಗ್ರಹಿಸಲಾಗುತ್ತಿತ್ತು.
ಈ ದೇಶಗಳಲ್ಲಿ ಒಂದು ವೆಬ್‌ಸೈಟ್ ಇದೆ, ಅದು ಸೋಂಕಿತರ ವಿವರಗಳ ಬಗ್ಗೆ ನಾಗರಿಕರಿಗೆ ತಿಳಿಸುತ್ತದೆ. ಸ್ಥಳೀಯ ಸರ್ಕಾರವು ಒದಗಿಸಿದ ಮಾಹಿತಿಯೊಂದಿಗೆ ಈ ಸೈಟ್ ಅನ್ನು ನಡೆಸಲಾಗುತ್ತದೆ. ಸೋಂಕಿತ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಲು ಈ ಮಾಹಿತಿಯು ನಾಗರಿಕರಿಗೆ ಸಹಾಯ ಮಾಡುತ್ತದೆ. ಸರ್ಕಾರ ಜಿಪಿಎಸ್, ಕಾಲ್ ಡೇಟಾದ ಸಹಾಯದಿಂದ ಹಲವಾರು ಆ್ಯಪ್‌ಗಳನ್ನು ರಚಿಸಿದೆ ಮತ್ತು ಅವುಗಳನ್ನು ಫೇಸ್‌ಬುಕ್, ಟ್ವಿಟ್ಟರ್ ಮತ್ತು ವಾಟ್ಸ್ಆ್ಯಪ್ ನೊಂದಿಗೆ ಲಿಂಕ್ ಮಾಡಿದೆ.
ಜನರು ಗಾಬರಿಗೊಳ್ಳುವ ಬದಲು ಯಾವ ಪ್ರದೇಶಕ್ಕೆ ಹೋಗಬೇಕು ಯಾವ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಬೇಕು ಎಂದು ಜನರು ಗುರುತಿಸುತ್ತಿದ್ದಾರೆ. ಸಾಮಾಜಿಕ ಅಂತರದ ಮಹತ್ವವನ್ನು ಅವರು ಅರ್ಥಮಾಡಿಕೊಂಡರು. ಈ ಸರ್ಕಾರಿ ವೆಬ್‌ಸೈಟ್‌ನಲ್ಲಿನ ಮಾಹಿತಿಯು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೂ ಸಹಾಯಕವಾಗಿದೆ. ಇದೇರೀತಿಯ ತಾಂತ್ರಿಕತೆಯನ್ನು ಬಳಸಿಕೊಂಡು ಇತರೆ ದೇಶಗಳು ಸಹ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಯುದ್ಧ ಮಾಡಬೇಕಿದೆ.