ಚೀನಾ: ಬಾವಲಿಗಳು ಸಾರ್ಸ್ ವೈರಸ್ ವಾಹಕಗಳು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದರೆ, ಇಲ್ಲೋರ್ವ ಯುವತಿ ಬಾವಲಿಯನ್ನೇ ತಟ್ಟೆಯಲ್ಲಿ ಹಾಕಿಕೊಂಡು ತಿನ್ನುತ್ತಿರುವ ದೃಶ್ಯ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ಎಚ್ಚರಿಸಿದ್ರೂ ಬಾವಲಿ ತಿನ್ನುವ ವಿಡಿಯೋ ವೈರಲ್ - ಕೊರೊನಾವೈರಸ್ಗೆ ಬಾವಲಿ ಪ್ರಮುಖ ಪಾತ್ರ
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಯುವತಿಯೊಬ್ಬಳು ಬಾವಲಿಯನ್ನು ತಿಂದಿದ್ದಾಳೆ. ಈ ಬಾವಲಿ ಆಹಾರವನ್ನು ಹುನಾನ್ ಸೀಫುಡ್ ಮಾರ್ಕೆಟ್ನಲ್ಲಿ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
![ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ಎಚ್ಚರಿಸಿದ್ರೂ ಬಾವಲಿ ತಿನ್ನುವ ವಿಡಿಯೋ ವೈರಲ್ ಬಾವಲಿ ತಿನ್ನುವ ಭಯಾನಕ ವಿಡಿಯೋ ವೈರಲ್, Horrifying video has emerged of a woman eating a bat](https://etvbharatimages.akamaized.net/etvbharat/prod-images/768-512-5826767-thumbnail-3x2-nin.jpg)
ಬಾವಲಿ ತಿನ್ನುವ ಭಯಾನಕ ವಿಡಿಯೋ ವೈರಲ್
ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಈ ಹಿನ್ನೆಲೆಯಲ್ಲಿ ಯುವತಿ ತಿನ್ನುತ್ತಿರುವ ಬಾವಲಿ ದೃಶ್ಯ ನೋಡುಗರ ಮೈ ಜುಮ್ಮೆನ್ನಿಸುವಂತಿದೆ.
ಕೊರೊನಾ ವೈರಸ್‌ಗೆ ಬಾವಲಿ ಪ್ರಮುಖ ಪಾತ್ರ:
ಮಾರಣಾಂತಿಕ ಕೊರೊನಾವೈರಸ್ ಬಾವಲಿಗಳು,ಹಾವುಗಳು ಹಾಗು ಹಾರಾಡುವ ಸಸ್ತನಿಗಳಿಂದ ಹರಡುತ್ತಿದೆ ಎಂದು ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ. ಚೀನಾದಲ್ಲೇ ಕೊರೊನಾ ವೈರಸ್‌ಗೆ 17 ಮಂದಿ ಬಲಿಯಾಗಿದ್ದಾರೆ. ಈ ವೈರಸ್ ಎಲ್ಲಿಂದ ಬಂತು ಎಂಬುದನ್ನು ಪತ್ತೆಹಚ್ಚಲು ಮುಂದಾದಾಗ ಬಾವಲಿಗಳ ಪಾತ್ರ ಪ್ರಮುಖ ಎನ್ನಲಾಗಿದೆ.