ಕರ್ನಾಟಕ

karnataka

ETV Bharat / international

ಐಸಿಸ್ ಹಿಡಿತದಿಂದ ಬಿಡುಗಡೆಗೊಂಡ ಬಳಿಕ ನೀಲಿ ಬಣ್ಣಕ್ಕೆ ತಿರುಗಿದ ಐತಿಹಾಸಿಕ ನಗರ - Mohammed Abdulhaq

2017ರಲ್ಲಿ ಐಸಿಸ್​ ಉಗ್ರರ ಹಿಡಿತದಿಂದ ಬಿಡುಗಡೆಗೊಂಡ ಇರಾಕಿನ ಐತಿಹಾಸಿಕ ನಗರ ಮೊಸುಲ್​ನ ಗತ ವೈಭವವನ್ನು ಮರಳಿ ತರುವ ಸಲುವಾಗಿ ಯುವಪಡೆಯೊಂದು ನಗರದ ಎಲ್ಲಾ ಕಟ್ಟಡ, ಗೋಡೆಗಳಿಗೆ ಬಣ್ಣ ಬಳಿದು ಅಲಂಕಾರ ಮಾಡುತ್ತಿದೆ.

Historic Mosul neighbourhood scarred by conflict turns blue
Historic Mosul neighbourhood scarred by conflict turns blue

By

Published : Apr 24, 2020, 4:27 PM IST

ಮೊಸುಲ್ : ಇಸ್ಲಾಮಿಕ್ ಸ್ಟೇಟ್​ ಉಗ್ರರ ಕಪಿ ಮುಷ್ಟಿಯಿಂದ ಮುಕ್ತಿ ಪಡೆದ ಬಳಿಕ ನಗರದ ಹಳೇ ವೈಭವವನ್ನು ಮರಳಿ ತರುವ ಸಲುವಾಗಿ ಯುವ ಸ್ವಯಂ ಸೇವಕರ ಗುಂಪೊಂದು ಕಟ್ಟಡಗಳಿಗೆ ಬಣ್ಣ ಬಳಿದು ಹೂವಿನಿಂದ ಅಲಂಕಾರ ಮಾಡುತ್ತಿದೆ.

ನಗರದ ಮನೆಗಳು ಮತ್ತು ಬೀದಿಗಳ ಗೋಡೆಗಳಿಗೆ ಕಡು ನೀಲಿ ಬಣ್ಣ ಬಳಿದು ಹೂವಿನ ಮಡಿಕೆ, ಬರ್ಡ್‌ಹೌಸ್‌ಗಳನ್ನು ನೇತು ಹಾಕಿ ಅಲಂಕರಿಸಲಾಗುತ್ತಿದೆ.

ನೀಲಿ ಬಣ್ಣಕ್ಕೆ ತಿರುಗಿದ ಐತಿಹಾಸಿಕ ಮೊಸುಲ್ ನಗರ

2014ರಲ್ಲಿ ಐಸಿಸ್​ ಉಗ್ರರು ಮೊಸುಲ್ ನಗರವನ್ನು ತಮ್ಮ ವಶಕ್ಕೆ ಪಡೆದು ನರಮೇದ ನಡೆಸಿದ್ದರು. ಸತತ ಸಮರದ ಬಳಿಕ 2017ರಲ್ಲಿ ಇರಾಕ್ ಸೇನೆ ನಗರವನ್ಜು ಮರಳಿ ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಐಸಿಸ್​ ಅಟ್ಟಹಾಸಕ್ಕೆ ಬ್ರೇಕ್ ಹಾಕಿತ್ತು.

ABOUT THE AUTHOR

...view details