ನವದೆಹಲಿ: ತಾಲಿಬಾನ್ ಆಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಅಲ್ಲಿನ ಜನ ದೇಶ ತೊರೆಯಲು ಮುಂದಾಗಿದ್ದಾರೆ. ಹಮೀದ್ ಕರ್ಜೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಮೂಲಕ ಬೇರೆ ಬೇರೆ ದೇಶಗಳಿಗೆ ತೆರಳಲು ಹರಸಾಹಸ ನಡೆಸುತ್ತಿದ್ದಾರೆ.
ಈ ಬೆನ್ನಲ್ಲೇ ಆಫ್ಘಾನಿಸ್ತಾನದಲ್ಲಿ ನಿರಾಶ್ರಿತರಾಗಿರುವ ಅಲ್ಪಸಂಖ್ಯಾತರು ಅಂದರೆ ಹಿಂದೂಗಳು, ಸಿಖ್ಖರಿಗೆ ಕಾಬೂಲ್ನಲ್ಲಿರುವ ಕರ್ತೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ನೀಡಲಾಗಿದೆ ಎಂದು ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿಯ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮತ್ತಷ್ಟು ಮಾಹಿತಿ ನೀಡಿರುವ ಸಿರ್ಸಾ ಕಾಬೂಲ್ನಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಲು ಕಾಬೂಲ್ ಗುರುದ್ವಾರ ಕಮಿಟಿಯೊಂದಿಗೆ ಸತತವಾಗಿ ಸಂಪರ್ಕದಲ್ಲಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಕಾಬೂಲ್ನ ಗುರುದ್ವಾರ ಕಮಿಟಿಯೊಂದಿಗೆ ನಾನು ಸತತವಾಗಿ ಸಂಪರ್ಕದಲ್ಲಿದ್ದೇನೆ. ಈ ಗುರುದ್ವಾರದಲ್ಲಿ ಸದ್ಯಕ್ಕೆ 50 ಹಿಂದುಗಳು, 270 ಸಿಖ್ಖರು ಸೇರಿದಂತೆ 320 ಮಂದಿ ಅಲ್ಪಸಂಖ್ಯಾತರಿಗೆ ಕರ್ತೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದಿದ್ದಾರೆ.