ನ್ಯೂಯಾರ್ಕ್ :ಪಾಕಿಸ್ತಾನವು ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು "ಉಪಪತ್ನಿಗಳು" ಮತ್ತು ಬಲವಂತದ ವಧುಗಳಾಗಿ ಚೀನಾಕ್ಕೆ ಮಾರಾಟ ಮಾಡುತ್ತಿದೆ ಎಂದು ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ರಾಜತಾಂತ್ರಿಕ ಸ್ಯಾಮ್ಯುಯೆಲ್ ಬ್ರೌನ್ಬ್ಯಾಕ್ ಆರೋಪಿಸಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಎಸಗಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಪರಿಣಾಮಕಾರಿ ಬೆಂಬಲವಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಪಾಕಿಸ್ತಾನವನ್ನು ನಿರ್ದಿಷ್ಟ ಕಾಳಜಿಯ ದೇಶವಾಗಿ (country of particular concern) ನೇಮಿಸಲು ಇದು ಒಂದು ಕಾರಣ ಎಂದು ಉಲ್ಲೇಖಿಸಿದ್ದಾರೆ.