ಬೀಜಿಂಗ್(ಚೀನಾ) : 5ಜಿ ತಂತ್ರಜ್ಞಾನವನ್ನಾಧರಿಸಿದ ಸ್ಮಾರ್ಟ್ ಬಸ್‌ಗಳು ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಷೆಂಗ್ಶೋ ನಗರದಲ್ಲಿ ಕಾಣಿಸಿಕೊಂಡಿವೆ. ಸದ್ಯ ಇಂತಹ ಸುಮಾರು 50 ಬಸ್‌ಗಳು ಶೆನ್ಜೆನ್ ನಗರದಲ್ಲಿ ಸಂಚಾರ ಆರಂಭಿಸಿವೆ.
ಪ್ರಾಯಾಣಿಕರು ಈ ಬಸ್ಗಳಿಗೆ ಹತ್ತಿ ತಮ್ಮ ಸ್ಮಾರ್ಟ್ಫೋನ್ಗಳಿಗೆ ಉಚಿತ 5ಜಿ ವೇಗವನ್ನು ಹೊಂದಿರುವ ವೈಫೈ ಕನೆಕ್ಟ್ ಮಾಡಿಕೊಳ್ಳಬಹುದು. ಅಲ್ಲದೆ ಕೇವಲ 12 ಸೆಕೆಂಡ್ಗಳಲ್ಲಿ 8ಜಿ ಫಿಲ್ಮ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ರಸ್ತೆಗೆ ಇಳಿಯಿತು 5ಜಿ ಸ್ಮಾರ್ಟ್ ಬಸ್.. ಈ ಬಸ್ನ ವಿಶೇಷತೆಗಳೇನು..?
ಚೀನಾದ ಶೆನ್ಜೆನ್ ನಗರದಲ್ಲಿ ಇಂತಹ 5ಜಿ ಮೊಬೈಲ್ ನೆಟ್ವರ್ಕ್ ಆಧಾರಿತ ಸುಮಾರು 50 ಬಸ್‌ಗಳು ರಸ್ತೆಗಿಳಿದಿವೆ. ನಿಯಮಿತವಾಗಿ ರಸ್ತೆಗಿಳಿದಿರುವ ಈ ಬಸ್‌ಗಳಲ್ಲಿ ಹಲವು ವಿಶೇಷತೆಗಳಿವೆ.ಪ್ರಯಾಣಿಕರಿಗೆ ಉಚಿತ 5ಜಿ ನೆಟ್ವರ್ಕ್ ಆ್ಯಕ್ಸೆಸ್ ಹಾಗೂ ವಿಆರ್ ಹೆಡ್ಸೆಟ್(ವಿರ್ಚುವಲ್ ರಿಯಾಲಿಟಿ)ಗಳನ್ನು ಬಸ್ನಲ್ಲಿ ಒದಗಿಸಲಾಗುತ್ತದೆ. 360* ಕೋನದಲ್ಲಿ ದೃಶ್ಯ ಸಂಗ್ರಹಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸ್ವಯಂಚಾಲಿತ 5ಜಿ ಸ್ಮಾರ್ಟ್ ಬಸ್.. ಇಂತಹ ಪ್ರತಿ ಬಸ್‌ಗಳು ಸ್ವಯಂಚಾಲಿತ. ಇದಕ್ಕೆ ಯಾವುದೇ ಚಾಲಕರ ಅವಶ್ಯಕತೆ ಇಲ್ಲ. ಅಲ್ಲದೆ, ರಸ್ತೆಮುಂದೆ ಯಾರಾದರೂ ಅಡ್ಡಬಂದಲ್ಲಿ ಸ್ವಯಂ ಚಾಲಿತವಾಗಿ ಬಸ್ ನಿಲ್ಲುತ್ತದೆ. ಯಾವುದೇ ಅಡೆತಡೆ ಎದುರಾದರೂ ಬಸ್ ಸ್ಟಾಪ್ ಆಗುತ್ತದೆ. ಅಗತ್ಯಕ್ಕೆ ತಕ್ಕಂತೆ ರಸ್ತೆಯ ಪಥಗಳನ್ನು ಬದಲಿಸುವ ಹಾಗೂ ಬೇರೆ ವಾಹನಗಳನ್ನು ಓವರ್ಟೇಕ್ ಮಾಡುವಂತಹ ತಂತ್ರಜ್ಞಾನವನ್ನೂ ಬಸ್ಗಳಿಗೆ ಅಳವಡಿಸಲಾಗಿದೆ.
ಯಾವುದೇ ಬಸ್ ನಿಲ್ದಾಣಗಳಲ್ಲಿ ಈ ಬಸ್ಗಳನ್ನು ಪ್ರಯಾಣಿಕರು ನಿಲ್ಲಿಸಬಹುದು. 5ಜಿ ತಂತ್ರಜ್ಞಾನದೊಂದಿಗೆ ರಿಮೋಟ್ ಮೂಲಕ ಬಸ್ಗಳನ್ನು ಮಾನಿಟರಿಂಗ್ ಮಾಡಿ, ಪ್ರಯಾಣಿಕರು ತಮಗೆ ಬೇಕಾದಲ್ಲಿ ಹೋಗಬಹುದು.
ಇದಲ್ಲದೆ, ಉತ್ತಮ ಗುಣಮಟ್ಟದ ವಿವಿಧ ಮೂರು ಆಯಾಮದ ನಕ್ಷೆ ಇದರಲ್ಲಿದೆ. ಬಸ್ನ ಸಮಯ, ರಸ್ತೆಯ ಗುಣಮಟ್ಟ ಹಾಗೂ ಸ್ಥಿತಿಗತಿಗಳನ್ನೂ ತಿಳಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಇಂತಹ ಬಸ್ಗಳನ್ನು ವಿಸ್ತರಿಸುವ ಗುರಿಯನ್ನ ಚೀನಾ ದೇಶ ಹೊಂದಿದೆ..
ಬಸ್ನಲ್ಲೇ ಸಿಗುತ್ತೆ ರೂಟ್ ಮ್ಯಾಪ್..