ಕಾಬೂಲ್:ಅಫ್ಘಾನಿಸ್ತಾನದ ಹೆಲ್ಮಂಡ್‌ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸವು ಸತತ 8ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಾಂತೀಯ ರಾಜಧಾನಿಯಲ್ಲಿ ಇದುವರೆಗೆ ಹಲವು ನಾಗರಿಕರು ಕೂಡ ಸಾವನ್ನಪ್ಪಿದ್ದಾರೆ.
ವಾರದ ಹಿಂದೆ ಆರಂಭವಾದ ಘರ್ಷಣೆಗಳು, ಅಫ್ಘಾನಿಸ್ತಾನದ ಲಷ್ಕರ್ಗಾದಲ್ಲಿ ತಾಲಿಬಾನ್ ಮತ್ತು ಸೇನಾ ಪಡೆಗಳ ನಡುವೆ ಇನ್ನೂ ಮುಂದುವರಿದಿದೆ. ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್, ಗವರ್ನರ್ ಕಚೇರಿ, ಜೈಲು ಮತ್ತು ಇತರ ಸರ್ಕಾರಿ ಕಟ್ಟಡಗಳ ಸಮೀಪ ದಾಳಿಗಳು ನಡೆಯುತ್ತಿವೆ. ಅನೇಕ ನಾಗರಿಕರು ಕೂಡ ಸಾವನ್ನಪ್ಪಿದ್ದಾರೆ, ಆದರೆ ನಿಖರವಾದ ಸಂಖ್ಯೆಗಳು ಲಭ್ಯವಿಲ್ಲ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಆಗಸ್ಟ್ 3ರ ವೇಳೆಗಾಗಲೇ ಅಫ್ಘಾನಿಸ್ತಾನದ ಭದ್ರತಾ ಪಡೆಗಳು ಹೆಲ್ಮಂಡ್‌ನಲ್ಲಿ ನಡೆಸಿದ ವಾಯುದಾಳಿ ಮತ್ತು ಭೂ ಕಾರ್ಯಾಚರಣೆಗಳಲ್ಲಿ ಮಿಲಿಟರಿ ಆಯೋಗದ ಮೂವರು ಮುಖ್ಯಸ್ಥರು ಸೇರಿದಂತೆ 75 ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರು ಹತರಾಗಿದ್ದಾರೆ.