ಕರ್ನಾಟಕ

karnataka

ETV Bharat / international

Viral Video- ತಾಲಿಬಾನ್​ ಜೊತೆ ಮಾಜಿ ಅಧ್ಯಕ್ಷ ಘನಿ ಸಹೋದರ ಹಷ್ಮತ್ ಮಾತುಕತೆ! - ಅಫ್ಘಾನಿಸ್ತಾನ

ಕುಚೀಸ್​ ಗ್ರ್ಯಾಂಡ್ ಕೌನ್ಸಿಲ್​ನ ಮುಖ್ಯಸ್ಥ ಮತ್ತು ಕಾಬೂಲ್ ಮೂಲದ ದಿ ಘನಿ ಗ್ರೂಪ್​ನ ಅಧ್ಯಕ್ಷ ಹಷ್ಮತ್ ಘನಿ ತಾಲಿಬಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

Hashmat Ghani
ಹಷ್ಮತ್ ಮಾತುಕತೆ ವಿಡಿಯೋ ವೈರಲ್​

By

Published : Aug 22, 2021, 12:15 PM IST

Updated : Aug 22, 2021, 12:47 PM IST

ಹೈದರಾಬಾದ್:ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರ ಸಹೋದರ ಹಷ್ಮತ್ ಘನಿ ತಾಲಿಬಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಹರಿದಾಡುತ್ತಿದ್ದಂತೆ ಹಷ್ಮತ್​ ಟ್ವೀಟೊಂದನ್ನು ಮಾಡಿದ್ದಾರೆ.

ಕುಚೀಸ್​ ಗ್ರ್ಯಾಂಡ್ ಕೌನ್ಸಿಲ್​ನ ಮುಖ್ಯಸ್ಥ ಮತ್ತು ಕಾಬೂಲ್ ಮೂಲದ ದಿ ಘನಿ ಗ್ರೂಪ್​ನ ಅಧ್ಯಕ್ಷ ಹಷ್ಮತ್ ಘನಿ ಟ್ವೀಟ್​ ಮಾಡಿದ್ದು, "ನಮ್ಮ ಜನಸಂಖ್ಯೆಯ ಅರ್ಧದಷ್ಟು ಜನರು ದಿನನಿತ್ಯದ ವೇತನವನ್ನು ಅವಲಂಬಿಸಿದ್ದಾರೆ. ಅಗತ್ಯವಿದ್ದಾಗ ಅವರ ಹಣವನ್ನು ತಡೆಯುವುದು ಅನಾಹುತಗಳಿಗೆ ಕಾರಣವಾಗಬಹುದು" ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಇನ್ನೊಂದು ಟ್ವೀಟ್​ನಲ್ಲಿ "ತಾಲಿಬಾನ್ ಭದ್ರತೆಯನ್ನು ತರುವಲ್ಲಿ ಸಮರ್ಥರಾಗಿದ್ದಾರೆ. ಜೊತೆಗೆ ಕ್ರಿಯಾತ್ಮಕ ಸರ್ಕಾರವನ್ನು ನಡೆಸಲು ವಿದ್ಯಾವಂತ ಜನರ ಅಗತ್ಯತೆ ಇದೆ" ಎಂದು ಅವರು ಹೇಳಿದ್ದಾರೆ.

ತಾಲಿಬಾನ್ ನಾಯಕ ಖಲೀಲ್-ಉರ್-ರೆಹಮಾನ್ ಮತ್ತು ಧಾರ್ಮಿಕ ವಿದ್ವಾಂಸ ಮುಫ್ತಿ ಮಹಮೂದ್ ಜಾಕಿರ್ ಜೊತೆ ಹಷ್ಮತ್ ಘನಿ ಇರುವ ವಿಡಿಯೋ ವೈರಲ್​ ಆಗಿತ್ತು.

ತಾಲಿಬಾನ್​ ಕಾಬೂಲನ್ನು ವಶಪಡಿಸಿಕೊಂಡ ತಕ್ಷಣ, ಅಶ್ರಫ್ ಘನಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ್ದರು. ಆ ಬಳಿಕ ಯುಎಇಯಲ್ಲಿ ಆಶ್ರಯ ಪಡೆದಿರುವ ಘನಿ, ಅಫ್ಘಾನಿಸ್ತಾನಕ್ಕೆ ಮರಳಲು ತಾಲಿಬಾನ್​ಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Last Updated : Aug 22, 2021, 12:47 PM IST

ABOUT THE AUTHOR

...view details