ಕರ್ನಾಟಕ

karnataka

ETV Bharat / international

ಬಾಗ್ದಾದ್​ನಲ್ಲಿ ಅಮೆರಿಕ​ ವೈಮಾನಿಕ ದಾಳಿ: ಇರಾಕ್ ಸೇನಾ ಪಡೆಯ ಪ್ರಮುಖ ಕಮಾಂಡರ್​ ಹತ್ಯೆ - ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಉಪ ಮುಖ್ಯಸ್ಥರಾಗಿರುವ ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ

ಬಾಗ್ದಾದ್ ಏರ್​​ಪೋರ್ಟ್​ನಲ್ಲಿ ಅಮೆರಿಕ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾಕ್​ ಹಾಗೂ ಇರಾನ್​ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಉಪ ಮುಖ್ಯಸ್ಥರಾಗಿರುವ ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆಯಾಗಿದ್ದಾರೆ.

top Iran commander Qasem Soleimani killed in Baghdad attack
ಕಾಸಿಮ್‌ ಸುಲೇಮಾನಿ

By

Published : Jan 3, 2020, 8:45 AM IST

Updated : Jan 3, 2020, 9:21 AM IST

ಬಾಗ್ದಾದ್:ಬಾಗ್ದಾದ್ ಏರ್​​ಪೋರ್ಟ್​ನಲ್ಲಿ ಅಮೆರಿಕದ ಪಡೆಗಳು​ ನಡಸಿದ ವೈಮಾನಿಕ ದಾಳಿಯಲ್ಲಿ ಇರಾಕ್​ ಹಾಗೂ ಇರಾನ್​ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆಯಾಗಿದ್ದಾರೆ.

ಇರಾಕ್​-ಇರಾನ್​​ ಪ್ರತಿಭಟನಾಕಾರರು ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದ ಬಳಿಕ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಇದರ ಬೆನ್ನಲ್ಲೇ ಬಾಗ್ದಾದ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಂದು ಅಮೆರಿಕ ರಾಕೆಟ್​ ದಾಳಿ ನಡೆಸಿದೆ.

ದಾಳಿಯಲ್ಲಿ ಶಕ್ತಿಶಾಲಿ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಉಪ ಮುಖ್ಯಸ್ಥರಾಗಿರುವ ಕಾಸಿಮ್‌ ಸುಲೇಮಾನಿ ಅವರನ್ನು ಕೊಲ್ಲಲಾಗಿದೆ. ಅಲ್ಲದೇ ಘಟನೆಯಲ್ಲಿ ಇರಾಕಿ ಮಿಲಿಟರಿಯ ಕಮಾಂಡರ್ ಅಬು ಮಹ್ದಿ ಅಲ್-ಮುಹಂಡಿಸ್ (ಪಾಪ್ಯುಲರ್‌​ ಮೊಬಿಲೈಸೇಶನ್​ ಪಡೆ) ಸೇರಿ ಒಟ್ಟು 8 ಮಂದಿ ಮೃತಪಟ್ಟಿರುವುದಾಗಿ ಎಂದು ಇರಾಕಿ ಸುದ್ದಿ ವಾಹಿನಿ ತಿಳಿಸಿದೆ.

ಮಂಗಳವಾರ ಇರಾಕಿ ಹಾಗೂ ಇರಾನಿ ಪ್ರತಿಭಟನಾಕಾರರು ಬಾಗ್ದಾದ್‌ನ ಯುಎಸ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದ್ದದರಿಂದ ಆಕ್ರೋಶಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, " ಈ ಕೃತ್ಯಕ್ಕೆ ಇರಾಕ್​ ದೊಟ್ಟ ಮಟ್ಟದಲ್ಲಿ ಬೆಲೆ ತೆರಬೇಕಾಗುತ್ತೆ. ಇದು ಎಚ್ಚರಿಕೆಯಲ್ಲ, ಬೆದರಿಕೆ " ಎಂದು ಟ್ವೀಟ್​ ಮಾಡಿದ್ದರು. ಇದೀಗ ಕಾಸಿಮ್‌ ಸುಲೇಮಾನಿ ಹತ್ಯೆಯ ಬಳಿಕ ತಮ್ಮ ಟ್ವಿಟರ್​ನಲ್ಲಿ ಅಮೆರಿಕದ ಧ್ವಜವನ್ನು ಪೋಸ್ಟ್​ ಮಾಡಿದ್ದಾರೆ.

ಆದರೆ ಕಾಸಿಮ್‌ ಸುಲೇಮಾನಿಯವರ ಸಾವಿನ ಬಗ್ಗೆ ಇರಾಕ್​ ಹಾಗೂ ಯುಎಸ್​​ ಸರ್ಕಾರ ಅಧಿಕೃತವಾಗಿ ತಿಳಿಸಿಲ್ಲ. ಬಾಗ್ದಾದ್‌ ಏರ್​​ಪೋರ್ಟ್​ ಬಳಿ ಕಾರ್ಯಾಚರಣೆ ಮುಂದುವರೆದಿದೆ.

Last Updated : Jan 3, 2020, 9:21 AM IST

For All Latest Updates

ABOUT THE AUTHOR

...view details