ಕರ್ನಾಟಕ

karnataka

ETV Bharat / international

ಮಹಮ್ಮದ್ ಅಹ್ಮದಿನೆಜಾದ್ ಬೆಂಬಲಿಗ ಅಯತೊಲ್ಲಾ ಯಾಜ್ಡಿ ನಿಧನ - ಮಹಮ್ಮದ್ ಅಹ್ಮದಿನೆಜಾದ್ ಬೆಂಬಲಿಗ ಅಯತೊಲ್ಲಾ ಯಾಜ್ಡಿ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಅಯತೊಲ್ಲಾ ಮೊಹಮ್ಮದ್ ತಾಕಿ ಮೆಸ್ಬಾ ಯಾಜ್ಡಿ (85) ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಅಯತೊಲ್ಲಾ ಮೊಹಮ್ಮದ್ ತಾಕಿ ಮೆಸ್ಬಾ ಯಾಜ್ಡಿ
ಅಯತೊಲ್ಲಾ ಮೊಹಮ್ಮದ್ ತಾಕಿ ಮೆಸ್ಬಾ ಯಾಜ್ಡಿ

By

Published : Jan 2, 2021, 9:18 AM IST

ತೆಹರಾನ್​​: ಇರಾನಿನ ಮಾಜಿ ಅಧ್ಯಕ್ಷ ಮಹಮ್ಮದ್ ಅಹ್ಮದಿನೆಜಾದ್ ಅವರ ಬೆಂಬಲಿಗ ಅಯತೊಲ್ಲಾ ಮೊಹಮ್ಮದ್ ತಾಕಿ ಮೆಸ್ಬಾ ಯಾಜ್ಡಿ (85) ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದಾಗಿ ಯಾಜ್ಡಿ ಇತ್ತೀಚೆಗೆ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಆಸ್ಪತ್ರೆಯಿಂದ ಡಿಸ್ಜಾರ್ಜ್​ ಮಾಡಿ ಇರಾನಿನ ಪವಿತ್ರ ನಗರವಾದ ಕೋಮ್ನದಲ್ಲಿರುವ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಆರೋಗ್ಯದಲ್ಲಿ ತೀರಾ ಏರುಪೇರು ಕಂಡು ಬಂದ ಹಿನ್ನೆಲೆ ಟೆಹ್ರಾನ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಇನ್ನು ಯಾಜ್ಡಿ ಅವರು ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು. ಇವರ ಅಂತ್ಯಕ್ರಿಯೆಯನ್ನು ಪಾದ್ರಿಗಳು ಕೋಮ್ನದಲ್ಲಿ ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details