ಕ್ವೆಟ್ಟಾ: ನೈಋತ್ಯ ಪಾಕಿಸ್ತಾನದಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಬಂದೂಕುಧಾರಿಗಳು ಜನಪ್ರಿಯ ಸ್ಥಳೀಯ ಗಾಯಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆಯ ತಂದೆ ಹನೀಫ್ ಚಾಮ್ರೋಕ್ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಟರ್ಬತ್ ಪಟ್ಟಣದಲ್ಲಿ ಈ ಘನಟೆ ನಡೆದಿದೆ. ಹತ್ಯೆಯ ಉದ್ದೇಶ ತಕ್ಷಣವೇ ತಿಳಿದು ಬಂದಿಲ್ಲ ಮತ್ತು ಇಲ್ಲಿಯವರೆಗೆ ಯಾರೂ ಕೂಡ ಹತ್ಯೆಯ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಗುಂಡು ಹಾರಿಸಿದ ನಂತರ ಬಂದೂಕುಧಾರಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ರೋಶನ್ ಅಲಿ ಮಾಹಿತಿ ನೀಡಿದ್ದಾರೆ.