ಕರ್ನಾಟಕ

karnataka

ETV Bharat / international

ಪಾಕಿಸ್ತಾನ: ಪೋಲಿಯೋ ಕಾರ್ಮಿಕರ ಬೆಂಗಾವಲಿಗಿದ್ದ ಪೊಲೀಸ್​​ಗೆ ಗುಂಡಿಕ್ಕಿ ಹತ್ಯೆ! - ಪೊಲೀಸ್​ನನ್ನು ಹತ್ಯೆಗೈದ ಬಂದೂಕುಧಾರಿಗಳು

ಕಳೆದ ವರ್ಷ ನೈಜೀರಿಯಾವನ್ನು ವೈಲ್ಡ್​​ ಪೋಲಿಯೋ ವೈರಸ್ ಮುಕ್ತವೆಂದು ಘೋಷಿಸಿದ ನಂತರ, ಪಾಕಿಸ್ತಾನ ಮತ್ತು ನೆರೆಯ ಅಫ್ಘಾನಿಸ್ತಾನದಲ್ಲಿ ಪೋಲಿಯೋ ಸ್ಥಳೀಯವಾಗಿ ಉಳಿದುಕೊಂಡಿದೆ.

ಪೊಲೀಸ್​ನನ್ನು ಹತ್ಯೆಗೈದ ಬಂದೂಕುಧಾರಿಗಳು
ಪೊಲೀಸ್​ನನ್ನು ಹತ್ಯೆಗೈದ ಬಂದೂಕುಧಾರಿಗಳು

By

Published : Jan 12, 2021, 8:48 PM IST

ಪೇಶಾವರ:ಪೋಲಿಯೋ ಕಾರ್ಮಿಕರ ತಂಡದ ಬೆಂಗಾವಲಿಗಿದ್ದ ಪೊಲೀಸ್​​ನನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಮಂಗಳವಾರ ವಾಯುವ್ಯ ಪಾಕಿಸ್ತಾನದಲ್ಲಿ ನಡೆದಿದೆ.

ಕರಾಕ್ ತಂಡದ ಪೋಲಿಯೋ ಕಾರ್ಮಿಕರಿಗೆ ಯಾವುದೇ ಹಾನಿಯಾಗಿಲ್ಲ, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಸ್ಥಳದಿಂದ ಪರಾರಿಯಾದ ದಾಳಿಕೋರರಿಗಾಗಿ ಶೋಧ ನಡೆಯುತ್ತಿದೆ. ದಾಳಿಯ ಹೊಣೆಯನ್ನು ಯಾರೂ ಕೂಡ ಹೊತ್ತಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಇರ್ಫಾನ್ ಖಾನ್ ಹೇಳಿದ್ದಾರೆ.

ಪಾಕಿಸ್ತಾನ ನಿಯಮಿತವಾಗಿ ಪೋಲಿಯೋ ಡ್ರೈವ್‌ಗಳನ್ನು ಪ್ರಾರಂಭಿಸುತ್ತಿದೆ. 2018ರಲ್ಲಿ ಕೇವಲ 12 ಪ್ರಕರಣಗಳು ವರದಿಯಾದಾಗ ಪೋಲಿಯೋವನ್ನು ಮತ್ತೆ ನಿವಾರಿಸಬೇಕೆಂದು ಆಶಿಸಿತ್ತು. ಆದರೆ ನಂತರದ ವರ್ಷಗಳಲ್ಲಿ ಹೊಸ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಪಾಕಿಸ್ತಾನದಾದ್ಯಂತ 40 ದಶಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ಪೋಲಿಯೋ ವಿರೋಧಿ ಡ್ರೈವ್ ಆರಂಭಿಸಲಾಗಿತ್ತು.

ಓದಿ:ಜಪಾನ್​ನಲ್ಲಿ ಭಾರೀ ಹಿಮಪಾತ: 13 ಮಂದಿ ಸಾವು, 250 ಜನರಿಗೆ ಗಾಯ

ಉಗ್ರಗಾಮಿಗಳು ಆಗಾಗ್ಗೆ ಪೋಲಿಯೋ ತಂಡಗಳನ್ನು ಮತ್ತು ಅವರನ್ನು ರಕ್ಷಿಸಲು ನಿಯೋಜಿಸಲಾದ ಪೊಲೀಸರನ್ನು ಗುರಿಯಾಗಿಸಿ ಗುಂಡು ಹಾರಿಸುತ್ತಿದ್ದಾರೆ. ಇದು ಪಾಶ್ಚಿಮಾತ್ಯರ ಪಿತೂರಿ ಎಂದು ಪಾಕಿಸ್ತಾನಿ ತಾಲಿಬಾನ್ ಹೇಳಿಕೊಂಡಿದೆ.

ಕಳೆದ ವರ್ಷ ನೈಜೀರಿಯಾವನ್ನು ವೈಲ್ಡ್​​ ಪೋಲಿಯೋ ವೈರಸ್ ಮುಕ್ತವೆಂದು ಘೋಷಿಸಿದ ನಂತರ, ಪಾಕಿಸ್ತಾನ ಮತ್ತು ನೆರೆಯ ಅಫ್ಘಾನಿಸ್ತಾನದಲ್ಲಿ ಪೋಲಿಯೋ ಸ್ಥಳೀಯವಾಗಿ ಉಳಿದುಕೊಂಡಿದೆ.

ABOUT THE AUTHOR

...view details