ಕಾಬೂಲ್: ಅಫ್ಘಾನಿಸ್ತಾನದ ಪೂರ್ವ ವಾರ್ಡಾಕ್ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ವಾಹನಗಳನ್ನು ತಡೆದಿದ್ದು, ಸುಮಾರು 28 ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿದ್ದಾರೆ ಎಂದು ಪೊಲೀಸ್ ವಕ್ತಾರ ಹಜ್ಜಿ ಮೊಹಮ್ಮದ್ ಒಫಿಯಾನಿ ತಿಳಿಸಿದ್ದಾರೆ.
ಕಾಬೂಲ್ನಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ 28 ಮಂದಿ ಅಪಹರಣ: ತಾಲಿಬಾನ್ ಉಗ್ರರಿಂದ ಕೃತ್ಯ? - ಪೂರ್ವ ವಾರ್ಡಾಕ್ ಪ್ರಾಂತ್ಯ ಸುದ್ದಿ
ಪೂರ್ವ ವಾರ್ಡಾಕ್ ಪ್ರಾಂತ್ಯದಲ್ಲಿ ವಾಹನಗಳನ್ನು ತಡೆದ ಅಪರಿಚಿತ ಬಂದೂಕುಧಾರಿಗಳು ಸುಮಾರು 28 ಪ್ರಯಾಣಿಕರನ್ನು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಬೂಲ್
"ಅಪರಿಚಿತ ಬಂದೂಕುಧಾರಿಗಳು ಈ ಕೃತ್ಯ ಎಸಗಿದ್ದು, ತಾಲಿಬಾನ್ ಉಗ್ರ ಸಂಘಟನೆ ಎಂದು ಅನುಮಾನಿಸಲಾಗಿದೆ. ಜಲ್ರಿಜ್ ಜಿಲ್ಲೆಯ ಕಾಬೂಲ್ನ 28 ನಾಗರಿಕರನ್ನು ಒತ್ತೆಯಾಳಾಗಿರಿಸಿದ್ದಾರೆ" ಎಂದು ಅಧಿಕಾರಿ ಚೀನಾದ ಕ್ಸಿನ್ಹುವಾ ನ್ಯೂಸ್ ಏಜೆನ್ಸಿಗೆ ಮಾಹಿತಿ ನೀಡಿದೆ. ಇನ್ನು ಘಟನೆಯ ಬಗ್ಗೆ ಯಾವುದೇ ಉಗ್ರ ಸಂಘಟನೆಯು ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಸದ್ಯ ಅಪಹರಣಕ್ಕೊಳಗಾದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಮತ್ತು ಸುರಕ್ಷಿತವಾಗಿ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಒಫಿಯಾನಿ ತಿಳಿಸಿದ್ದಾರೆ.