ಕರ್ನಾಟಕ

karnataka

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋತಬಯ ರಾಜಪಕ್ಸೆಗೆ ಜಯ: ಪ್ರಧಾನಿ ಮೋದಿ ವಿಶ್​

By

Published : Nov 17, 2019, 1:34 PM IST

ಪೊದುಜನ ಪಕ್ಷದ ಅಭ್ಯರ್ಥಿಯಾಗಿ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ಗೋತಬಯ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷ ಗಾದಿಗೇರಲಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರಸ್ತುತ ಇದ್ದ ಆಡಳಿತ ಪಕ್ಷದ ಅಭ್ಯರ್ಥಿಗೆ ಸೋಲುಣಿಸಿದ್ದಾರೆ.

ಗೋತಬಯ ರಾಜಪಕ್ಸೆ

ಕೊಲಂಬೋ(ಶ್ರೀಲಂಕಾ):ಈ ಬಾರಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಗೋತಬಯ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷ ಗಾದಿಗೇರಲಿದ್ದಾರೆ.

ಗೋತಬಯ ರಾಜಪಕ್ಸೆ ಪೊದುಜನ ಪಕ್ಷದ ಅಭ್ಯರ್ಥಿಯಾಗಿ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಆಡಳಿತ ಪಕ್ಷಕ್ಕೆ ಸೋಲುಣಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮೋದಿ, ಗೋತಬಯ ರಾಜಪಕ್ಸೆಗೆ ಶುಭಾಶಯ ತಿಳಿಸಿದ್ದಾರೆ. ಎರಡು ದೇಶಗಳ ನಡುವಿನ ಸಹೋದರ ಸಂಬಂಧ ವೃದ್ಧಿಸಿ, ದೇಶದಲ್ಲಿ ಶಾಂತಿ ಹಾಗೂ ಭದ್ರತೆ ಹೆಚ್ಚಿಸುವ ಸಲುವಾಗಿ ನಿಮ್ಮೊಂದಿಗೆ ಕರ್ತವ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ ಎಂದು ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ಇನ್ನೊಂದೆಡೆ ನರೇಂದ್ರ ಮೋದಿ ಟ್ವೀಟ್​ ಮೂಲಕ ವಿಶ್​ ಮಾಡಿದ 10 ನಿಮಿಷದೊಳಗೆ ಗೋತಬಯ ರಾಜಪಕ್ಸೆ ಪ್ರತಿಕ್ರಿಯೆ ನೀಡಿದ್ದು, ಟ್ವೀಟ್​ ಮೂಲಕ ನರೇಂದ್ರ ಮೋದಿ ಹಾಗೂ ಭಾರತೀಯರಿಗೆ ಧನ್ಯವಾದ ಹೇಳಿದ್ದಾರೆ.

ABOUT THE AUTHOR

...view details