ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್) : ಒಂದು ವೇಳೆ ಸರ್ಕಾರ ಮಾಧ್ಯಮ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದೇ ಆದಲ್ಲಿ ನಾವು ದೇಶದಲ್ಲಿ ಸರ್ಚ್ ಎಂಜಿನ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಜಾಗತಿಕ ಟೆಕ್ ದೈತ್ಯ ಗೂಗಲ್ ಕಂಪನಿ ಬೆದರಿಕೆ ಹಾಕಿದೆ.
ಈ ನಿಯಮ ಜಾರಿಗೆ ಬಂದಿದ್ದೇ ಆದಲ್ಲಿ ಸ್ಥಳೀಯ ಮಾಧ್ಯಮಗಳು ತನ್ನೊಂದಿಗೆ ಹಂಚುವ ಮಾಹಿತಿಗೆ ಗೂಗಲ್ ಮತ್ತು ಫೇಸ್‌ಬುಕ್ ಹಣ ಪಾವತಿ ಮಾಡಲೇಬೇಕಾಗುತ್ತದೆ. ಹಾಗಾಗಿ ಈ ನಿಯಮದ ವಿರುದ್ಧ ಗೂಗಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ದೇಶದಲ್ಲಿ ಸ್ಥಳೀಯ ಸುದ್ದಿಗಳು ಗೂಗಲ್‌ನಲ್ಲಿ ಪ್ರಕಟವಾಗಬೇಕಾದರೆ ನೀವು ಹಣ ಪಾವತಿಸಬೇಕು ಎಂದು ಆಸ್ಟ್ರೇಲಿಯಾ ಸರ್ಕಾರ ಗೂಗಲ್ ಸಂಸ್ಥೆಗೆ ತಿಳಿಸಿದೆ. ಸರ್ಕಾರ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಾದರೆ ಆಸ್ಟ್ರೇಲಿಯಾದಲ್ಲಿ ನಾವು ಸರ್ಚ್ ಎಂಜಿನ್ ಸ್ಥಗಿತಗೊಳಿಸಲಿದ್ದೇವೆ ಎಂದು ಗೂಗಲ್ ಎಚ್ಚರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಸ್ಕಾಟ್ ಮೊರಿಸನ್, ಈ ಬೆದರಿಕೆಗಳಿಗೆ ನಾವು ಪ್ರತಿಕ್ರಿಯಿಸಲ್ಲ ಎಂದಿದ್ದಾರೆ.
ಗೂಗಲ್ ಆಸ್ಟ್ರೇಲಿಯಾದಲ್ಲಿ ಚಾಲನೆಯಲ್ಲಿರಬೇಕಾದರೆ, ದೇಶದ ಕೆಲ ನಿಯಮಗಳನ್ನು ಅನುಸರಿಬೇಕು. ಈ ಕಾನೂನು ಸಂಸತ್ನಲ್ಲಿಯೂ ಮಂಡಿಸಲಾಗಿದೆ ಎಂದು ಮೊರಿಸನ್ ತಿಳಿಸಿದ್ದಾರೆ.