ವೆಲ್ಲಿಂಗ್ಟನ್(ನ್ಯೂಜಿಲೆಂಡ್):ವಿಶ್ವದೆಲ್ಲೆಡೆ ಇದುವರೆಗೂ 70,81,811ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, 4,05,074ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 34,55,104ಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ.
ಇತ್ತ, ನ್ಯೂಜಿಲೆಂಡ್ ಕೊರೊನಾ ಮುಕ್ತ ದೇಶವಾಗಿದೆ. ಸೋಂಕಿಗೆ ಒಳಗಾದ ಅಂತಿಮ ವ್ಯಕ್ತಿ ಚೇತರಿಸಿಕೊಂಡಿದ್ದಾನೆ ಎಂದು ನ್ಯೂಜಿಲೆಂಡ್ನ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ ಬಳಿಕ ಅಲ್ಲಿ ಕೊರೊನಾ ವೈರಸ್ ನಿರ್ಮೂಲನೆ ಆಗಿದೆ. ಈ ದೇಶದಲ್ಲಿ ಕಳೆದ 17 ದಿನಗಳಿಂದ ಯಾವುದೇ ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿಲ್ಲ.