ರೋಮ್: ಕೋವಿಡ್-19ಗೆ ಇಟಲಿಯಲ್ಲಿ ಇಂದು ಒಂದೇ ದಿನ 969 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 8,215ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ ಒಟ್ಟು 86,500 ಕೊರೊನಾ ಪ್ರಕರಣಗಳು ವರದಿಯಾಗಿವೆ.
ಕೊರೊನಾಗೆ ಇಟಲಿಯಲ್ಲಿ ಒಂದೇ ದಿನ 969 ಮಂದಿ ಬಲಿ... ವಿಶ್ವದಾದ್ಯಂತ ಸಾವಿನ ಸಂಖ್ಯೆ 25,000ಕ್ಕೆ ಏರಿಕೆ - ಮಹಾಮಾರಿ ಕೊರೊನಾ
ಮಹಾಮಾರಿ ಕೊರೊನಾಗೆ ಜಗತ್ತಿನಾದ್ಯಂತ ಬಲಿಯಾದವರ ಸಂಖ್ಯೆ 25,278ಕ್ಕೆ ಏರಿಕೆಯಾಗಿದ್ದು, ಇಟಲಿಯಲ್ಲೇ 8,215 ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ಮಹಾಮಾರಿ ಕೊರೊನಾಗೆ ಜಗತ್ತಿನಾದ್ಯಂತ ಬಲಿಯಾದವರ ಸಂಖ್ಯೆ 25,278ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಇಟಲಿಯದ್ದೇ ಸಿಂಹಪಾಲಾಗಿದೆ. ಇಟಲಿಯ ನಂತರದ ಸ್ಥಾನದಲ್ಲಿ ಸ್ಪೇನ್ (4,858 ಸಾವು), ಚೀನಾ (3,292 ಸಾವು), ಇರಾನ್ (2,378) ಹಾಗೂ ಅಮೆರಿಕಾ (1,321) ರಾಷ್ಟ್ರಗಳು ಇವೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಪ್ರಪಂಚದಾದ್ಯಂತ ಈವರೆಗೆ ಒಟ್ಟು 5,59,103 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಟಲಿ, ಸ್ಪೇನ್, ಚೀನಾವನ್ನು ಅಮೆರಿಕಾ ಹಿಂದಿಕ್ಕಿದೆ. ಸ್ಪೇನ್ನಲ್ಲಿ 64,059, ಇಟಲಿಯಲ್ಲಿ 80,589, ಚೀನಾದಲ್ಲಿ 81,340 ಪ್ರಕರಣಗಳಿದ್ದರೆ, ಅಮೆರಿಕಾದಲ್ಲಿ ಬರೊಬ್ಬರಿ 86,548 ಪ್ರಕರಣಗಳು ದೃಢಪಟ್ಟಿವೆ.