ಕರ್ನಾಟಕ

karnataka

ETV Bharat / international

ಜಾಧವ್ ಪರ ವಕೀಲರನ್ನು ನೇಮಿಸಲು ಭಾರತಕ್ಕೆ ಮತ್ತೊಂದು ಅವಕಾಶ ನೀಡಿ : ಪಾಕಿಸ್ತಾನ - ಜಾಧವ್ ಪ್ರಕರಣಕ್ಕೆ ವಕೀಲರ ನೇಮಕ

ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಣಷ್ ಜಾಧವ್ ಅವರನ್ನು ಪ್ರತಿನಿಧಿಸಲು ವಕೀಲರನ್ನು ನೇಮಕ ಮಾಡಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಪಾಕಿಸ್ತಾನದ ಹೈಕೋರ್ಟ್ ತಿಳಿಸಿದೆ.

Kulabhushana jadhav
Kulabhushana jadhav

By

Published : Sep 3, 2020, 6:03 PM IST

ಇಸ್ಲಾಮಾಬಾದ್ :ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಣಷ್ ಜಾಧವ್ ಅವರನ್ನು ಪ್ರತಿನಿಧಿಸಲು ವಕೀಲರನ್ನು ನೇಮಕ ಮಾಡಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಪಾಕಿಸ್ತಾನದ ಹೈಕೋರ್ಟ್ ತಿಳಿಸಿದೆ.

ಜಾಧವ್ ಅವರ ಪ್ರಕರಣವನ್ನು ವಿಚಾರಣೆ ನಡೆಸಿದ ಇಸ್ಲಾಮಾಬಾದ್ ಹೈಕೋರ್ಟ್ ವಕೀಲರ ನೇಮಕಕ್ಕೆ ಸೂಚನೆ ನೀಡಿತು.

ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಆದೇಶಗಳನ್ನು ಪಾಲಿಸಲು ಪಾಕಿಸ್ತಾನವು ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡಿತ್ತು. ಆದರೆ, ಜಾಧವ್ ಪರ ವಕೀಲರನ್ನು ನೇಮಿಸುವ ಪಾಕಿಸ್ತಾನದ ಪ್ರಸ್ತಾಪಕ್ಕೆ ಭಾತರ ಉತ್ತರಿಸಿಲ್ಲ ಎಂದು ಪಾಕಿಸ್ತಾನದ ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಕೋರ್ಟ್ ಗೆ ತಿಳಿಸಿದರು.

2017 ರ ಏಪ್ರಿಲ್ ನಲ್ಲಿ ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆರೋಪದ ಮೇಲೆ 50 ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್ ಅವರಿಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯವು ಮರಣದಂಡನೆ ಶಿಕ್ಷೆ ನೀಡಿತ್ತು.

ABOUT THE AUTHOR

...view details