ಕರ್ನಾಟಕ

karnataka

ETV Bharat / international

ಗ್ಯಾಸ್​ ಸಿಲಿಂಡರ್ ಸ್ಫೋಟ: 8 ಮಂದಿ ಸಾವು, ಇಬ್ಬರಿಗೆ ಗಾಯ - ನೈರುತ್ಯ ಪಾಕಿಸ್ತಾನ

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಾಶ್ಕೆಲ್‌ ಪಟ್ಟಣದಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡು ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿದೆ.

Gas cylinder blast at roadside market kills 8 in Pakistan
ಪಾಕಿಸ್ತಾನದಲ್ಲಿ ಸ್ಪೋಟ

By

Published : Jun 8, 2021, 12:40 PM IST

ಕ್ವೆಟ್ಟಾ ( ಪಾಕಿಸ್ತಾನ ):ನೈರುತ್ಯ ಪಾಕಿಸ್ತಾನದ ರಸ್ತೆ ಬದಿಯ ಮಾರುಕಟ್ಟೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎಂಟು ಜನರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.

ಇರಾನ್‌ ಗಡಿಗೆ ಹೊಂದಿಕೊಂಡಿರುವ ಬಲೂಚಿಸ್ತಾನ್ ಪ್ರಾಂತ್ಯದ ಸಣ್ಣ ಪಟ್ಟಣವಾದ ಮಾಶ್ಕೆಲ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಹಸಿಲ್ ಖಾನ್ ಹೇಳಿದ್ದಾರೆ. ಸ್ಫೋಟದಿಂದ ಮಣ್ಣಿನ ಇಟ್ಟಿಗೆಯಿಂದ ನಿರ್ಮಿಸಲಾಗಿದ್ದ ಅಂಗಡಿಗಳು ಕುಸಿದು ಬಿದ್ದು, ಸಾವು-ನೋವು ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಸತ್ತವರಲ್ಲಿ ಅಫ್ಘಾನ್​ನ ನಿರಾಶ್ರಿತರು ಒಳಗೊಂಡಿದ್ದಾರೆ ಎಂದು ಖಾನ್ ಹೇಳಿದ್ದಾರೆ. ಈ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಖಾನ್ ಮಾಹಿತಿ ನೀಡಿದ್ದಾರೆ. ಮಾಶ್ಕೆಲ್‌ ನಗರವು ಬಲೂಚಿಸ್ತಾನದ ರಾಜಧಾನಿಯಾದ ಕ್ವೆಟ್ಟಾದಿಂದ ಪಶ್ಚಿಮಕ್ಕೆ 150 ಕಿಲೋ ಮೀಟರ್ ದೂರದಲ್ಲಿದೆ.

ಓದಿ : ಪಾಕ್ ರೈಲು ದುರಂತ: ಮೃತರ ಸಂಖ್ಯೆ 51ಕ್ಕೆ ಏರಿಕೆ

ABOUT THE AUTHOR

...view details