ಕರ್ನಾಟಕ

karnataka

ETV Bharat / international

ಹಾಂಕಾಂಗ್​ನ ಚುನಾವಣೆ ವ್ಯವಸ್ಥೆ ಬದಲಿಸಿದ ಚೀನಾ: ಜಿ7 ರಾಷ್ಟ್ರಗಳು ತೀವ್ರ ಕಳವಳ

ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್​ ಮತ್ತು ಅಮೆರಿಕ ರಾಷ್ಟ್ರಗಳು ಒಳಗೊಂಡ ಜಿ 7 ವಿದೇಶಾಂಗ ಸಚಿವರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿಗಳು ಚೀನಾದ ಅಧಿಕಾರಿಗಳ ನಿರ್ಧಾರಕ್ಕೆ ಗಂಭೀರ ಕಳವಳ ಒಕ್ಕೊರಲಿನಿಂದ ವ್ಯಕ್ತಪಡಿಸಿದ್ದಾರೆ.

hong-kong
hong-kong

By

Published : Mar 13, 2021, 12:25 PM IST

ಪ್ಯಾರಿಸ್:ಜಿ 7 ರಾಷ್ಟ್ರಿಗಳ ಉನ್ನತ ರಾಜತಾಂತ್ರಿಕರು ಹಾಂ​ಕಾಂಗ್​ ಬಗ್ಗೆ ಚೀನಾದ ರಾಷ್ಟ್ರೀಯ ನೀತಿಯಾಗಿ 'ದೇಶಭಕ್ತರು' ಮಾತ್ರ ನಗರ ಆಳಬಲ್ಲದು ಎಂಬುದರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಉನ್ನತ ರಾಜತಾಂತ್ರಿಕರು ಹಾಂಕಾಂಗ್‌ನ ಚುನಾವಣಾ ವ್ಯವಸ್ಥೆಯನ್ನು ತೀವ್ರವಾಗಿ ಕೂಲಂಕಷವಾಗಿ ಪರಿಶೀಲಿಸುವ ನಿರ್ಣಯ ಅಂಗೀಕರಿಸುವ ಬಗ್ಗೆ 'ಗಂಭೀರ ಕಳವಳ' ಆತಂಕ ವ್ಯಕ್ತಪಡಿಸಿದ್ದಾರೆ. ಈ ಶಾಸನದಿಂದ ನಗರದಲ್ಲಿನ ವಿರೋಧಿ ಧ್ವನಿ ಮತ್ತಷ್ಟು ತಗ್ಗಬಹುದು ಎಂಬುದು ಚೀನಾದ ಹುನ್ನಾರವಾಗಿದೆ.

ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್​ ಮತ್ತು ಅಮೆರಿಕ ರಾಷ್ಟ್ರಗಳು ಒಳಗೊಂಡ ಜಿ- 7 ವಿದೇಶಾಂಗ ಸಚಿವರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿಗಳು ಚೀನಾದ ಅಧಿಕಾರಿಗಳ ನಿರ್ಧಾರಕ್ಕೆ ಗಂಭೀರ ಕಳವಳಗಳನ್ನು ಒಕ್ಕೊರಲಿನಿಂದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​ ಲಸಿಕೆ ಪಡೆದ ರತನ್​ ಟಾಟಾ: 'ಇದೊಂದು ನೋವುರಹಿತ ವ್ಯಾಕ್ಸಿನ್​'- ರತನ್​ ಸಂತಸ

ಹಾಂಕಾಂಗ್​​​ನಲ್ಲಿ ಚುನಾವಣಾ ವ್ಯವಸ್ಥೆಯು ಪ್ರಜಾಪ್ರಭುತ್ವದ ಆಸೆಯಗಳನ್ನು ಸೆವೆಯುವಂತೆ ಮಾಡುತ್ತದೆ. ಇಂತಹ ನಿರ್ಧಾರವು ಚೀನಾದ ಮುಖ್ಯ ಭೂಭಾಗದಲ್ಲಿರುವ ಅಧಿಕಾರಿಗಳು ಹಾಂಕಾಂಗ್‌ನಲ್ಲಿನ ಭಿನ್ನಾಭಿಪ್ರಾಯದ ಧ್ವನಿಗಳು ಮತ್ತು ಅಭಿಮತಗಳನ್ನು ತೊಡೆದುಹಾಕಲು ನಿರ್ಧರಿಸಿದ್ದಾರೆ ಎಂದು ಬಲವಾಗಿ ಸೂಚಿಸುತ್ತದೆ ಎಂದು ಜಿ 7 ದೇಶಗಳ ಜಂಟಿ ಪ್ರಕಟಣೆಯಲ್ಲಿ ತೀಕ್ಷ್ಣವಾಗಿ ಪ್ರತಿರೋಧಿಸಿವೆ.

ಪ್ರಜಾಪ್ರಭುತ್ವ ಪರ ಕಾರ್ಯಕರ್ತರು ಮತ್ತು ರಾಜಕಾರಣಿಗಳ ಸಾಮೂಹಿಕ ಬಂಧನದೊಂದಿಗೆ ಬದಲಾವಣೆಗಳ ಪ್ಯಾಕೇಜ್ ಒನ್ ಕಂಟ್ರಿ, ಟು ಸಿಸ್ಟಮ್ಸ್ ತತ್ವದಡಿ ಹಾಂಕಾಂಗ್‌ನ ಉನ್ನತ ಮಟ್ಟದ ಸ್ವಾಯತ್ತತೆಯನ್ನು ಹಾಳು ಮಾಡುತ್ತದೆ ಎಂದು ಜಿ 7 ಸಚಿವರು ಹೇಳಿದ್ದಾರೆ.

ಮೂಲ ಕಾನೂನಿನಲ್ಲಿ ಸೂಚಿಸಿರುವಂತೆ ಸಾರ್ವತ್ರಿಕ ಮತದಾನದತ್ತ ಸಾಗುವ ಉದ್ದೇಶಕ್ಕೆ ವಿರುದ್ಧವಾಗಿ ಈ ಶಾಸನ ರಾಜಕೀಯ ಬಹುತ್ವವನ್ನು ನಿಗ್ರಹಿಸುತ್ತದೆ. ಇದಲ್ಲದೇ, ಈಗಿನ ಬದಲಾವಣೆಗಳು ವಾಕ್ ಸ್ವಾತಂತ್ರ್ಯ ತಗ್ಗಿಸುತ್ತದೆ. ಹಾಂಕಾಂಗ್‌ನ ಜನರು ಹಾಂಕಾಂಗ್‌ನ ಹಿತದೃಷ್ಟಿಯಿಂದ ಮತ ಚಲಾಯಿಸಲು ನಂಬಿಕೆ ಇಡಬೇಕು. ವಿಭಿನ್ನ ಅಭಿಪ್ರಾಯಗಳ ಚರ್ಚೆ, ಅವರನ್ನು ಮೌನಗೊಳಿಸಿದೆ. ಹಾಂಕಾಂಗ್‌ನ ಸ್ಥಿರತೆ ಮತ್ತು ಸಮೃದ್ಧಿಯನ್ನು ಭದ್ರಪಡಿಸುವ ಮಾರ್ಗಕಂಡುಕೊಳ್ಳಬೇಕಿದೆ ಎಂದಿದೆ.

ABOUT THE AUTHOR

...view details