ಕರ್ನಾಟಕ

karnataka

ETV Bharat / international

ಜಪಾನ್ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಆಯ್ಕೆ - ಜಪಾನ್​ ಅಧ್ಯಕ್ಷರ ನೇಮಕಕ್ಕೆ ಚುನಾವಣೆ

ಜಪಾನ್​ನ ಆಡಳಿತ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ನಾಯಕರಾಗಿ ಫುಮಿಯೋ ಕಿಶಿಡಾ ಆಯ್ಕೆಯಾಗಿದ್ದು, ಮುಂದಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Fumio Kishida to become Japan next prime minister
ಜಪಾನ್ ಮುಂದಿನ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಆಯ್ಕೆ

By

Published : Sep 29, 2021, 12:44 PM IST

Updated : Sep 29, 2021, 12:53 PM IST

ಟೋಕಿಯೋ(ಜಪಾನ್)​:ಯೋಶಿಹಿಡೆ ಸುಗಾ ಅವರ ನಂತರದ ಜಪಾನ್​ನ ನೂತನ ಪ್ರಧಾನ ಮಂತ್ರಿಯಾಗಿ ಫುಮಿಯೋ ಕಿಶಿಡಾ ಆಯ್ಕೆಯಾಗಿದ್ದು, ಆಡಳಿತ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ನಾಯಕರಾಗಿ ಆಯ್ಕೆಯಾಗಿದ್ದಾರೆ.

ರಾಯಿಟರ್ಸ್ ಈ ಕುರಿತು ವರದಿ ಮಾಡಿದ್ದು, ಟಾರೋ ಕೊನೊ, ಪುಮಿಯೋ ಕಿಶಿಡಾ, ಸಾನೆ ಟಕೈಚಿ ಮತ್ತು ಸಿಯಾಕೊ ನೊಡ ಅವರು ಪಕ್ಷದ ನಾಯಕ ಸ್ಥಾನಕ್ಕೆ ಅರ್ಥಾತ್​​ ಪ್ರಧಾನ ಮಂತ್ರಿ ಗಾದಿಗೆ ರೇಸ್​​ನಲ್ಲಿದ್ದರು.

ಪ್ರಧಾನಿಯಾಗಿ ಆಯ್ಕೆಯಾಗಿರುವ ಫುಮಿಯೋ ಕಿಶಿಡಾ ಅವರಿಗೆ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಕೋವಿಡ್ ಸಾಂಕ್ರಾಮಿಕ, ಆರ್ಥಿಕ ವ್ಯವಸ್ಥೆಯ ಚೇತರಿಕೆ, ಅಮೆರಿಕದೊಂದಿಗೆ ಸಂಬಂಧ ವೃದ್ಧಿ ಮತ್ತು ಪ್ರಾದೇಶಿಕ ಭದ್ರತಾ ಅಪಾಯಗಳನ್ನು ತಡೆಯುವ ಸವಾಲುಗಳಿವೆ.

ಇದನ್ನೂ ಓದಿ: ಭಾರತದಲ್ಲಿ ತರಬೇತಿಯಲ್ಲಿರುವ ಆಫ್ಘನ್ ಸೈನಿಕರಿಗೆ 6 ತಿಂಗಳ ಇ-ವೀಸಾ ವಿತರಣೆ

Last Updated : Sep 29, 2021, 12:53 PM IST

ABOUT THE AUTHOR

...view details