ಬೈರುತ್(ಲೆಬನಾನ್) :ಅಕ್ರಮವಾಗಿ ಇಂಧನ ಸಂಗ್ರಹಿಸಿದ್ದ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 20 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಲೆಬನಾನ್ನಲ್ಲಿ ನಡೆದಿದೆ. ಘಟನೆಯಲ್ಲಿ ಹತ್ತಾರು ಜನರ ಸ್ಥಿತಿ ಗಂಭೀರವಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸ್ಫೋಟಕ್ಕೆ ಕಾರಣ ಏನೆಂಬುದು ಈವರೆಗೂ ತಿಳಿದು ಬಂದಿಲ್ಲ. ಕಳೆದ ಹಲವಾರು ತಿಂಗಳಿಂದ ಇಂಧನ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗಿವೆ.
ಜನರನ್ನು ಲೆಬಾನಿನ ರೆಡ್ ಕ್ರಾಸ್ ಬಳಿ ಇಂಧನ ಟ್ಯಾಂಕರ್ವೊಂದು ಸ್ಫೋಟಗೊಂಡಿದ್ದು, 20ಕ್ಕೂ ಹೆಚ್ಚು ಕಾರ್ಮಿಕರ ದೇಹಗಳು ಛಿದ್ರವಾಗಿವೆ ಎಂದು ತಿಳಿದು ಬಂದಿದೆ. ಗಾಯಗೊಂಡಿದ್ದ 79ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಘಟನೆ ನಡೆದ ಕೂಡಲೇ ಲೆಬನಾನಿನ ಸೈನಿಕರು ಸ್ಥಳವನ್ನು ಸುತ್ತುವರಿದು, ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಈ ಬಗ್ಗೆ ಸೇನಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಅಕ್ರಮವಾಗಿ ಇಂಧನ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಸೇನೆಯು ಜಪ್ತಿ ಮಾಡಿದೆ. ಅಲ್ಲಿ ವಾಸಿಸುವ ನಿವಾಸಿಗಳಿಗೆ ಇಂಧನವನ್ನು ವಿತರಿಸಲು ಆದೇಶಿಸಲಾಗಿದೆ ಎಂದರು. ಸದ್ಯ ಈ ಘಟನೆಯು ದೇಶದಲ್ಲಿ ರಾಜಕೀಯ ತಲ್ಲಣವನ್ನು ಸೃಷ್ಟಿಸಿದೆ. ಈ ದುರಂತಕ್ಕೆ ರಾಜಕೀಯ ನಾಯಕರೇ ಕಾರಣ ಎಂದು ದೂರುತ್ತಿದ್ದು, ನಾವುಗಳೂ ನಿಮ್ಮನ್ನು ಹೀಗೆಯೇ ಸುಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.