ವುಹಾನ್(ಚೀನಾ): ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್‌ನಲ್ಲಿ ವಿದೇಶದಿಂದ ಆಮದು ಮಾಡಿಕೊಂಡ ಎರಡು ಆಹಾರ ಪ್ಯಾಕೇಟ್ಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ರೆಜಿಲ್‌ನಿಂದ ಆಮದು ಮಾಡಿಕೊಂಡ ಮಂಜುಗಡ್ಡೆಯಿಂದ ಮುಚ್ಚಲ್ಪಟ್ಟ ಹಂದಿ ಮಾಂಸ ಮತ್ತು ಉರುಗ್ವೆಯಿಂದ ಆಮದು ಮಾಡಿಕೊಂಡ ಮಂಜುಗಡ್ಡೆಯಿಂದ ಮುಚ್ಚಲ್ಪಟ್ಟ ಗೋಮಾಂಸದ ಪ್ಯಾಕೇಟ್ಗಳ ಮಾದರಿಯನ್ನು ಪರೀಕ್ಷಿಸಲಾಯಿತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಜೂನ್ 28ರಂದು 1,527 ಬಾಕ್ಸ್ಗಳಲ್ಲಿ 27.49 ಟನ್ ತೂಕದ ಹಂದಿ ಮಾಂಸವನ್ನು ಬ್ರೆಜಿಲ್‌ನಿಂದ ಶಾಂಘೈಗೆ ಆಮದು ಮಾಡಿಕೊಳ್ಳಾಗಿತ್ತು. ಜುಲೈ 27ರಂದು ಶಾಂಘೈನಿಂದ ವುಹಾನ್ಗೆ ಸಾಗಿಸಿ ಜುಲೈ 29ರಂದು ಸ್ಥಳೀಯ ಕೋಲ್ಡ್ ಸ್ಟೋರೇಜ್ನಲ್ಲಿ ಸಂಗ್ರಹಿಸಲಾಗಿದೆ. ಮಾರ್ಚ್ 2ರಂದು 1,210 ಬಾಕ್ಸ್ಗಳಲ್ಲಿ 26.93 ಟನ್ ತೂಕದ ಗೋಮಾಂಸವನ್ನು ಟಿಯಾಂಜಿನ್ಗೆ ರವಾನಿಸಲಾಗಿತ್ತಂತೆ.