ಢಾಕಾ(ಬಾಂಗ್ಲಾದೇಶ):ಬಾಂಗ್ಲಾದೇಶದ ಪದ್ಮಾ ನದಿಯ ನಡುವೆ ಸುಮಾರು 50 ಪ್ರಯಾಣಿಕರನ್ನು ಹೊತ್ತ ದೋಣಿ ಮಗುಚಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. 11 ಮಂದಿ ನಾಪತ್ತೆಯಾಗಿದ್ದಾರೆ.
ಬುಧವಾರ ಮಧ್ಯಾಹ್ನ ಬಾಂಗ್ಲಾದೇಶದ ಚಪೈನವಾಬ್‌ಗಂಜ್‌ನ ಶಿಬ್‌ಗಂಜ್ ಉಪಜಿಲಾದಲ್ಲಿ ಈ ಘಟನೆ ನಡೆದಿದೆ. ಸುಮಾರು 20 ಮಂದಿಯನ್ನು ಆ ವೇಳೆಯೇ ಜೀವಂತವಾಗಿ ರಕ್ಷಿಸಲಾಗಿತ್ತು. ಸಂಜೆ 6:30ರ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಇಂದು ಮುಂಜಾನೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಇದನ್ನೂ ಓದಿ:ಎಸ್ಬಿಐನ ಅಧಿಕೃತ ಬ್ರಾಂಚ್ಗಳಲ್ಲಿ ಚುನಾವಣಾ ಬಾಂಡ್ಗಳ ಮಾರಾಟಕ್ಕೆ ಅವಕಾಶ
ದೋಣಿಯು ಪಕಾರ್ ಬೋಗ್ಲೌರಿಯಿಂದ ದಸರ್ಷಿಯಾ ಘಾಟ್ಗೆ ಹೋಗುವ ದಾರಿಯಲ್ಲಿತ್ತು. ರಕ್ಷಣೆಗೊಂಡ ಓರ್ವರು ಮಾತನಾಡಿ, ದಸರ್ಷಿಯಾದಲ್ಲಿ ಸಂತೆ ದಿನವಾದ ಕಾರಣ ಹಚ್ಚು ತರಕಾರಿಗಳು ಬೋಟ್ನಲ್ಲಿದ್ದವು. ಹಾಗೂ ಸೈಕಲ್ಗಳು ಮತ್ತು ಹೆಚ್ಚಿನ ಪ್ರಯಾಣಿಕರು ಬೋಟ್ನಲ್ಲಿದ್ದರು ಎಂದಿದ್ದಾರೆ. ಲೆಕ್ಕಕ್ಕಿಂತ ಹೆಚ್ಚು ತೂಕವಾದ ಹಿನ್ನೆಲೆ, ಬೋಟ್ ಮಗುಚಿದೆ ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ.