ಕರಾಚಿ:ಪಾಕಿಸ್ತಾನದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಮಾಜಿ ಕ್ರಿಕೆಟರ್ ಶಾಹೀದ್ ಆಫ್ರಿದಿ ಬೆನ್ನಲ್ಲೇ ಇದೀಗ ಅಲ್ಲಿನ ಮಾಜಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿಗೂ ಕೊರೊನಾ ಸೋಂಕು ತಗಲಿರುವುದು ಕನ್ಫರ್ಮ್ ಆಗಿದೆ.
ಪಾಕ್ ಮಾಜಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿಗೂ ಕೊರೊನಾ! - ಮಹಮಾರಿ ಕೊರೊನಾ
17:32 June 13
ಪಾಕ್‌ನಲ್ಲಿ ಮಹಾಮಾರಿ ಕೊರೊನಾ ಅಬ್ಬರ
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹೊರಹಾಕಿರುವ ಗಿಲಾನಿ ಮಗ ಕಾಶಿಮ್ ಗಿಲಾನಿ, ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ತಂದೆಗೆ ಕೊರೊನಾ ವೈರಸ್ ಬರಲು ನಿಮ್ಮ ಸರ್ಕಾರ ಕಾರಣ, ಇದೀಗ ನನ್ನ ತಂದೆಯ ಜೀವನ ಅಪಾಯದಲ್ಲಿ ಸಿಲುಕಿದೆ ಎಂದಿದ್ದಾರೆ.
ಪಾಕ್ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಕೊರೊನಾ ಪಾಸಿಟಿವ್
ಕಳೆದ ಗುರುವಾರ ಮಾಜಿ ಪ್ರಧಾನಿ ಯೂಸೂಫ್ ಗಿಲಾನಿ ರಾವಲ್ಪಿಂಡಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ. ಪಾಕ್‌ನಲ್ಲಿ ಸದ್ಯ 1,25,933 ಕೋವಿಡ್ ಪ್ರಕರಣಗಳಿದ್ದು 2,463 ಜನರು ಸಾವನ್ನಪ್ಪಿದ್ದಾರೆ.