ಇಸ್ಲಮಾಬಾದ್(ಪಾಕಿಸ್ತಾನ): ಅಕ್ರಮವಾಗಿ ಹಣದ ವಹಿವಾಟು(ಮನಿ ಲಾಂಡರಿಂಗ್) ನಡೆಸಿದ ಪ್ರಕರಣ ಸಂಬಂಧ ಪಾಕ್ನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ನ್ಯಾಷನಲ್ ಅಕೌಂಟೆಬಲಿಟಿ ಬ್ಯೂರೋನಿಂದ ಬಂಧನಕ್ಕೊಳಗಾಗಿದ್ದಾರೆ.
ಮನಿ ಲಾಂಡರಿಂಗ್ ಕೇಸ್: ಪಾಕ್ ಮಾಜಿ ಅಧ್ಯಕ್ಷನ ಬಂಧನ! - undefined
ಅಕ್ರಮವಾಗಿ ಹಣದ ವಹಿವಾಟು ನಡೆಸಿದ ಪ್ರಕರಣ ಸಂಬಂಧ ಪಾಕ್ನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯನ್ನು ಪಾಕಿಸ್ತಾನದ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ ಬಂಧಿಸಿ ಜೈಲಿಗೆ ಕಳುಹಿಸಿದೆ.
![ಮನಿ ಲಾಂಡರಿಂಗ್ ಕೇಸ್: ಪಾಕ್ ಮಾಜಿ ಅಧ್ಯಕ್ಷನ ಬಂಧನ!](https://etvbharatimages.akamaized.net/etvbharat/prod-images/768-512-3718900-thumbnail-3x2-jay.jpg)
ಪಾಕ್ನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ
ಹಣದ ಅಕ್ರಮ ವಹಿವಾಟಿನ ಮೂಲಕ ಬಹುಕೋಟಿ ಡಾಲರ್ ವಂಚನೆ ಮಾಡಿರುವ ಆರೋಪದ ಮೇಲೆ ಆಸಿಫ್ ಅಲಿ ಬಂಧನಕ್ಕೊಳಗಾಗಿದ್ದಾರೆ. ಇವರು ಪ್ಯಾರಥಾನ್ ಹೆಸರಿನ ನಕಲಿ ಕಂಪನಿಯನ್ನು ಶೇರುದಾರರಾಗಿ ಮುನ್ನಡೆಸುತ್ತಿದ್ದರು ಎಂಬ ಆರೋಪವಿದೆ.
ಅಲ್ಲದೆ ಪಾಕಿಸ್ತಾನ್ ನ್ಯಾಷನಲ್ ಬ್ಯಾಂಕ್ನಿಂದ ಪ್ಯಾರಥಾನ್ ಹೆಸರಲ್ಲಿ 1500 ಕೋಟಿ ರೂ. ಸಾಲ ಪಡೆದು, ಅಕ್ರಮವಾಗಿ ಕಂಪನಿ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರು ಎಂಬ ಆರೋಪವಿದೆ.