ಸ್ಲಾಮಾಬಾದ್ (ಪಾಕಿಸ್ತಾನ):ಪಾಕಿಸ್ತಾನದ ಮಾಜಿ ಪ್ರಧಾನಿ ಮಿರ್ ಜಫರುಲ್ಲಾ ಖಾನ್ ಜಮಾಲಿ (76) ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪಾಕ್ ಮಾಜಿ ಪ್ರಧಾನಿ ಮಿರ್ ಜಫರುಲ್ಲಾ ಖಾನ್ ಜಮಾಲಿ ನಿಧನ - ಮಿರ್ ಜಫರುಲ್ಲಾ ಖಾನ್ ಜಮಾಲಿ ನಿಧನ
ಹೃದಯಾಘಾತದಿಂದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಮಿರ್ ಜಫರುಲ್ಲಾ ಖಾನ್ ಜಮಾಲಿ ನಿಧನರಾಗಿದ್ದಾರೆ.
ಮಿರ್ ಜಫರುಲ್ಲಾ ಖಾನ್ ಜಮಾಲಿ ನಿಧನ
ವರದಿಗಳ ಪ್ರಕಾರ, ಹೃದಯಾಘಾತದಿಂದಾಗಿ ಜಫರುಲ್ಲಾ ಖಾನ್ ಜಮಾಲಿ ಅವರನ್ನು ರಾವಲ್ಪಿಂಡಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ.
ಜಫರುಲ್ಲಾ ಖಾನ್ ಜಮಾಲಿ 2002ರ ನವೆಂಬರ್ನಿಂದ 2014 ಜೂನ್ ವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಜಮಾಲಿ ಅವರ ನಿಧನಕ್ಕೆ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಸಂತಾಪ ಸೂಚಿಸಿದ್ದಾರೆ.