ಲಾಹೋರ್(ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದಾರೆ.
ಚೌಧ್ರಿ ಸಕ್ಕರೆ ಕಾರ್ಖಾನೆ ಷೇರುಗಳ ಖರೀದಿ ಮತ್ತು ಮಾರಾಟದಲ್ಲಿ ಹಣ ವರ್ಗಾವಣೆ ಆರೋಪವನ್ನ ನವಾಜ್ ಷರೀಫ್ ಕುಟುಂಬಸ್ಥರು ಎದುರಿಸುತ್ತಿದ್ದಾರೆ. ಚೌಧ್ರಿ ಸಕ್ಕರೆ ಕಾರ್ಖಾನೆ ಷೇರು ಖರೀದಿಯಲ್ಲಿ ಷರೀಫ್ ನೇರವಾಗಿ ಪಾಲುದಾರರಾಗಿದ್ದಾರೆ. ಕಳದೆ ಆಗಸ್ಟ್ ತಿಂಗಳಲ್ಲಿ ಷರೀಫ್ ಪುತ್ರಿ ಮತ್ತು ಆಕೆಯ ಸೋದರ ಸಂಬಂಧಿ ಯೂಸುಫ್ ಅಬ್ಬಾಸ್ ಕೂಡ ಬಂಧನಕ್ಕೆ ಒಳಗಾಗಿದ್ದರು.