ಬೀಜಿಂಗ್(ಚೀನಾ): ಉತ್ತರ ಚೀನಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಬಸ್ಸೊಂದು ನದಿಗೆ ಉರುಳಿ ಬಿದ್ದಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಬೀಜಿಂಗ್ನಿಂದ 265 ಕಿಲೋ ಮೀಟರ್ ದೂರದಲ್ಲಿರುವ ಶಿಜಿಯಾಸುಹಾಂಗ್ ನಗರದ ಸೇತುವೆ ಮುಳುಗಡೆಯಾಗಿದೆ. ಇದೇ ಮಾರ್ಗವಾಗಿ ಬಂದ ಬಸ್ ನೀರಿನ ರಭಸಕ್ಕೆ ಸಿಲುಕಿ ನದಿಗೆ ಉರುಳಿದೆ. ಬಸ್ ಮುಳುಗುತ್ತಿದ್ದ ವೇಳೆ ಪ್ರಯಾಣಿಕರು ಜೀವ ಉಳಿಸಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಹೆಬೈ ಪ್ರಾಂತ್ಯದ ಅಧಿಕಾರಿಗಳು ಬಸ್ಸಿನಲ್ಲಿದ್ದ 51 ಜನರ ಪೈಕಿ 37 ಜನರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.