ಬೀಜಿಂಗ್(ಚೀನಾ): ಇದೇ ಮೊದಲ ಬಾರಿಗೆ ರೆಡ್ಮಿ ಅವರಿಂದ ಮೊದಲ ಸ್ಮಾರ್ಟ್ ವಾಚ್ ಬಿಡುಗಡೆಯಾಗಲಿದೆ.
ಡಿಸೆಂಬರ್ 1 ರಂದು ಚೀನಾದಲ್ಲಿ ಈ ವಾಚ್ ಮಾರಾಟವಾಗಲಿದೆ.ಯುಎಸ್ ಸೇರಿದಂತೆ ಇತರ ಮಾರುಕಟ್ಟೆಗಳಲ್ಲೂ ಈ ವಾಚ್ ಸಿಗಬಹುದು ಎನ್ನಲಾಗಿದೆ. ಈ ವಾಚ್ ಕಪ್ಪು, ನೀಲಿ ಮತ್ತು ದಂತ ಬಿಳಿ ಮುಂತಾದ ವೈವಿಧ್ಯಮಯ ಬಣ್ಣಗಳಲ್ಲಿ ಇರಲಿದೆಯಂತೆ.
ಈ ಸ್ಮಾರ್ಟ್ ವಾಚ್ 1.4-ಇಂಚಿನ (320x320 ಪಿಕ್ಸೆಲ್) ಚದರ ಡಿಸ್ಪ್ಲೇ 323 ಪಿಪಿ ಪಿಕ್ಸೆಲ್ ಸಾಂದ್ರತೆ ಮತ್ತು 2.5 ಡಿ ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಹೊಂದಿದೆ. 120 ವಾಚ್ ಫೇಸ್ ಆಯ್ಕೆಗಳನ್ನು ಹೊಂದಿದ್ದು, 230 mAh ಬ್ಯಾಟರಿ ಒಳಗೊಂಡಿದೆ. ನಿಯಮಿತ ಬಳಕೆ ಮಾಡಿದರೆ ಪ್ರತಿ ಚಾರ್ಜ್ಗೆ 7 ದಿನಗಳು ಹಾಗೂ ಬ್ಯಾಟರಿ ಲೈಫ್ ಮೋಡ್‌ನಲ್ಲಿ 12 ದಿನಗಳು ಬಳಕೆ ಮಾಡಬಹುದಾಗಿದೆ. ಈ ವಾಚ್ ಸಂಪೂರ್ಣ ಚಾರ್ಚ್ ಮಾಡಬೇಂಕು ಎಂದರೆ 2 ಗಂಟೆ ಬೇಕಾಗುತ್ತದೆ.
ಈ ವಾಚ್ನ ಪ್ರಮುಖ ವಿಶೇಷತೆ ಏನೆಂದರೆ, 30 ದಿನಗಳವರೆಗೆ ಹೃದಯ ಬಡಿತ ದಾಖಲಿಸುತ್ತದೆ. ಹೃದಯ ಬಡಿತ ತುಂಬಾ ಹೆಚ್ಚಿರುವಾಗ ಇದು ಎಚ್ಚರಿಕೆಯನ್ನೂ ಸಹ ತೋರಿಸುತ್ತದೆ.