ಕರ್ನಾಟಕ

karnataka

ETV Bharat / international

ಬಾಹ್ಯಾಕಾಶ ನಿಲ್ದಾಣದಲ್ಲಿ 6 ಗಂಟೆ ಕಾಲ ನಡಿಗೆ: ಹೊಸ ದಾಖಲೆ ಬರೆದ ಚೀನಾದ ಮೊದಲ ಮಹಿಳೆ - ಚೀನಾ ಸ್ಪೇಸ್​​ ವಾಕ್​​

ಬಾಹ್ಯಾಕಾಶ ನಿಲ್ದಾಣದಲ್ಲಿ 6 ಗಂಟೆ ಕಾಲ ನಡೆಯುವ ಮೂಲಕ ಚೀನಾದ ಮಹಿಳೆಯೋರ್ವಳು ಇತಿಹಾಸ ಸೃಷ್ಟಿಸಿದ್ದಾಳೆ. ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವನ್ನು ಪೂರ್ಣಗೊಳಿಸಲು ಗಗನಯಾತ್ರಿಗಳು 6 ತಿಂಗಳ ಕಾಲ ಇಲ್ಲಿ ಉಳಿಯಲಿದ್ದಾರೆ. ಚೀನಾ ಇತಿಹಾಸದಲ್ಲೇ ಇದು ಸುದೀರ್ಘ ಅವಧಿಯ ಮಾನವಸಹಿತ ಯೋಜನೆಯಾಗಿದೆ.

first-chinese-woman-walks-in-space-scripts-history
ಬಾಹ್ಯಾಕಾಶ ನಿಲ್ದಾಣದಲ್ಲಿ 6 ಗಂಟೆ ಕಾಲ ನಡಿಗೆ

By

Published : Nov 8, 2021, 12:48 PM IST

ಬೀಜಿಂಗ್ (ಚೀನಾ): ನಿರ್ಮಾಣ ಹಂತದ ಬಾಹ್ಯಾಕಾಶ ನಿಲ್ದಾಣದಲ್ಲಿ 6 ಗಂಟೆಗಳ ಬಾಹ್ಯಾಕಾಶ ನಡಿಗೆ ಮುಗಿಸಿದ ಚೀನಾದ ಮೊದಲ ಮಹಿಳೆ ಎಂಬ ಕೀರ್ತಿಗೆ ವಾಂಗ್ ಯಾಪಿಂಗ್ ಭಾಜನರಾಗಿದ್ದಾರೆ.

ಟಿಯಾನ್ಹೆ ಎಂದು ಕರೆಯಲ್ಪಡುವ ಬಾಹ್ಯಾಕಾಶ ನಿಲ್ದಾಣದಲ್ಲಿ ತನ್ನ ಸಹೋದ್ಯೋಗಿ ಝೈ ಝಿಗಾಂಗ್ ಅವರೊಂದಿಗೆ 6 ಗಂಟೆಗಳ ಕಾಲ ಸ್ಪೇಸ್​​ ವಾಕ್​​ ಮುಗಿಸಿ ಮಾಡ್ಯೂಲ್​ಗೆ ಮರಳಿದ್ದಾರೆ ಎಂದು ಚೀನಾ ಮಾಧ್ಯಮ ವರದಿ ಮಾಡಿದೆ.

ಇದು ಚೀನಾದ ಬಾಹ್ಯಾಕಾಶ ಇತಿಹಾಸದಲ್ಲಿ ಮಹಿಳಾ ಗಗನಯಾತ್ರಿಗಳನ್ನು ಒಳಗೊಂಡ ಮೊದಲ ಬಾಹ್ಯಾಕಾಶ ನಡಿಗೆಯಾಗಿದೆ ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಚೀನಾ ಅ.16 ರಂದು ಶೆಂಝೌ-13 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತ್ತು. ಮುಂದಿನ ವರ್ಷದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದ್ದ ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ 6 ತಿಂಗಳ ಕಾರ್ಯಾಚರಣೆಯಲ್ಲಿ ಮೂವರು ಗಗನಯಾತ್ರಿಗಳನ್ನು ಕಳುಹಿಸಿತ್ತು.

ಸುಮಾರು 6.5 ಗಂಟೆಗಳಲ್ಲಿ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಇಬ್ಬರೂ 1:16 AM (ಬೀಜಿಂಗ್ ಸಮಯ)ಕ್ಕೆ ಮಾಡ್ಯೂಲ್‌ಗೆ ಮರಳಿದರು ಎಂದು ವರದಿಯಾಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳ ಅವಧಿಯ ಕಾರ್ಯಾಚರಣೆಗಾಗಿ ಅಕ್ಟೋಬರ್ 16 ರಂದು ಬಾಹ್ಯಾಕಾಶಕ್ಕೆ ನೌಕೆ ಉಡಾಯಿಸಲಾಯಿತು. ಇದು ಚೀನಾದ ಬಾಹ್ಯಾಕಾಶ ಇತಿಹಾಸದಲ್ಲಿ ಅತ್ಯಂತ ದೀರ್ಘವಾದ ಮಾನವಸಹಿತ ಕಾರ್ಯಾಚರಣೆಯಾಗಿದೆ.

ಇದನ್ನೂ ಓದಿ:ಯುವಜನತೆ ನಿಮ್ಮ ಮನದ ಮಾತಿನಂತೆ ನಡೆದುಕೊಳ್ಳಿ, ನಕಲು ಮಾಡಬೇಡಿ: NIT-Kಯಲ್ಲಿ ಇಸ್ರೋ ಅಧ್ಯಕ್ಷ ಶಿವನ್

ABOUT THE AUTHOR

...view details