ಲಡಾಕ್: ಪೂರ್ವ ಲಡಾಖ್ ಗಡಿ ವಾಸ್ತವ ರೇಖೆ(ಎಲ್ಎಸಿ)ಯಲ್ಲಿ ಗುಂಡಿನ ದಾಳಿ ನಡೆದಿದೆ.
ಪೂರ್ವ ಲಡಾಖ್ನ ಎಲ್‌ಎಸಿಯಲ್ಲಿ ಗುಂಡಿನ ದಾಳಿ - ಭಾರತದೊಂದಿಗೆ ಚೀನಾ ಯುದ್ಧ
ಚೀನಾ ಸೇನೆಯು ಫಿಂಗರ್ ಪ್ರದೇಶ, ಗಾಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಕೊಂಗ್ರಂಗ್ ನಲಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆ ಭಾರತ ಮತ್ತು ಚೀನಾ ಏಪ್ರಿಲ್-ಮೇ ತಿಂಗಳಿನಿಂದ ಭಿನ್ನಾಭಿಪ್ರಾಯದಲ್ಲಿ ತೊಡಗಿವೆ.
ಇತ್ತೀಚೆಗೆ ಭಾರತವು ಪ್ಯಾಂಗೊಂಗ್ ಸರೋವರದ ದಕ್ಷಿಣ ದಂಡೆಯ ಬಳಿಯ ಆಯಕಟ್ಟಿನ ಎತ್ತರದ ಪ್ರದೇಶದ ಮೇಲೆ ಹಿಡಿತ ಸಾಧಿಸುವ ಮೂಲಕ ಲಡಾಖ್ನ ಚುಶುಲ್ ಬಳಿಯ ದಕ್ಷಿಣದ ದಂಡಯ ಪಾಂಗೊಂಗ್ ತ್ಸೋ ಬಳಿಯ ಭಾರತೀಯ ಪ್ರದೇಶಗಳಿಗೆ ಆಕ್ರಮಣ ಮಾಡಲು ಮುಂದಾದ ಚೀನಾ ಸೇನೆಯ ಪ್ರಯತ್ನವನ್ನು ತಡೆದಿತ್ತು.
ಚೀನಾ ಸೇನೆಯು ಫಿಂಗರ್ ಪ್ರದೇಶ, ಗಾಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಕೊಂಗ್ರಂಗ್ ನಲಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆ ಭಾರತ ಮತ್ತು ಚೀನಾ ಏಪ್ರಿಲ್-ಮೇ ತಿಂಗಳಿನಿಂದ ಭಿನ್ನಾಭಿಪ್ರಾಯದಲ್ಲಿ ತೊಡಗಿವೆ. ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವಿಗೀಡಾದ ನಂತರ ಪರಿಸ್ಥಿತಿ ಹದಗೆಟ್ಟಿದೆ.ಈ ಸಂಬಂಧ ಎರಡೂ ರಾಷ್ಟ್ರದವರು ಮಾತುಕತೆ ನಡೆಸುತ್ತಿದ್ದರಾದರೂ ಇದುವರೆಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ.