ಕರ್ನಾಟಕ

karnataka

ETV Bharat / international

ಉಗ್ರರಿಗೆ ಆರ್ಥಿಕ ನೆರವು ತಡೆಯುವಲ್ಲಿ ವಿಫಲ; ಕಪ್ಪುಪಟ್ಟಿ ಸೇರಿದ ಪಾಕಿಸ್ತಾನ - ಕಪ್ಪುಪಟ್ಟಿಗೆ ಪಾಕಿಸ್ತಾನ

ಉಗ್ರರಿಗೆ ಆರ್ಥಿಕ ನೆರವು ಹಾಗೂ ಅಕ್ರಮ ಹಣವನ್ನು ತಡೆಗಟ್ಟುವ ನಲ್ವತ್ತು ಅಂಶಗಳಲ್ಲಿ ಪಾಕಿಸ್ತಾನ 32 ಅಂಶಗಳಲ್ಲಿ ವಿಫಲವಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಕಪ್ಪುಪಟ್ಟಿಗೆ ಸೇರಿದ ಪಾಕಿಸ್ತಾನ

By

Published : Aug 23, 2019, 12:36 PM IST

ಇಸ್ಲಾಮಾಬಾದ್: ಭಯೋತ್ಪಾದನೆ ಆರ್ಥಿಕ ನೆರವು ಹಾಗೂ ಅಕ್ರಮ ಹಣದ ಹರಿವು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಪೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್​(ಎಫ್​​ಎಟಿಎಫ್​​) ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದೆ.

ಉಗ್ರರಿಗೆ ಆರ್ಥಿಕ ನೆರವು ಹಾಗೂ ಅಕ್ರಮ ಹಣವನ್ನು ತಡೆಗಟ್ಟುವ 40 ಅಂಶಗಳಲ್ಲಿ ಪಾಕಿಸ್ತಾನ 32 ಅಂಶಗಳಲ್ಲಿ ವಿಫಲವಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ ವಾರ ಪಾಕಿಸ್ತಾನ ಸರ್ಕಾರ 450 ಪುಟಗಳ ವರದಿಯೊಂದನ್ನು ಎಫ್​​ಎಟಿಎಫ್​ಗೆ ಸಲ್ಲಿಕೆ ಮಾಡಿತ್ತು. ಈ ವರದಿಯಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಸರ್ಕಾರ ಅನುಸರಿಸಿದ ಕ್ರಮಗಳನ್ನು ಹಾಗೂ ನಂತರದಲ್ಲಾದ ಬದಲಾವಣೆಯನ್ನು ವಿವರಿಸಿತ್ತು.

ವರದಿಯಲ್ಲಿ ಲಷ್ಕರ್​​-ಇ-ತೈಬಾ/ ಜಮಾತ್​-ಉದ್-ದವಾ ಮುಖ್ಯಸ್ಥ ಹಫೀಜ್​ ಸಯೀದ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದನ್ನು ಉಲ್ಲೇಖಿಸಿತ್ತು. ಆದರೆ ಎಫ್​​ಎಟಿಎಫ್​ ನೀಡಿದ್ದ ಗಡುವಿನಲ್ಲಿ ಪಾಕಿಸ್ತಾನದ ಪ್ರಯತ್ನ ಪ್ರಾಮಾಣಿಕವಾಗಿ ಕಂಡುಬರದೇ ಇರುವ ಕಾರಣ ಇದೀಗ ಕಪ್ಪುಪಟ್ಟಿಗೆ ಸೇರಿಸಲಾಗಿದೆ.

ABOUT THE AUTHOR

...view details